*ಗೋಣಿಕೊಪ್ಪ, ಮಾ. ೧೭: ಆಫ್ರಿಕಾ ಖಂಡದ ಅತ್ಯಂತ ಎತ್ತರದ ಕಿಲಿಮಂಜಾರೊ ಪರ್ವತವನ್ನು ಗೋಣಿಕೊಪ್ಪದ ನಿವಾಸಿ ಉಮಾಮಹೇಶ್ವರಿ ಬಡಾವಣೆಯ ಒಂದನೇ ವಿಭಾಗದ ನೀತು ಚಂದನ್ ಏರಿದ್ದಾರೆ.
ಕಿಲಿಮಂಜಾರೊ ಪರ್ವತವು ಹಿಮದಿಂದ ಆವೃತವಾದ ಶಿಖರವನ್ನು ಹೊಂದಿದೆ. ಸಮುದ್ರಮಟ್ಟದಿಂದ ೫,೮೯೫ ಮೀಟರ್ (೧೯,೩೪೧ ಅಡಿ) ಎತ್ತರದಲ್ಲಿದೆ. ಈ ಪರ್ವತವನ್ನು ನೀತು ಚಂದನ್ ಅವರು ತಮ್ಮ ೪೩ನೇ ವಯಸ್ಸಿನಲ್ಲಿ ಏರುವ ಮೂಲಕ ಗಮನ ಸೆಳೆದಿದ್ದಾರೆ.
ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಮತ್ತು ವಿಶ್ವದ ಅತಿ ಎತ್ತರದ ಸ್ವತಂತ್ರವಾಗಿ ನಿಂತಿರುವ ಪರ್ವತವಾಗಿದ್ದು, ಕಿಬೋ, ಮಾವೆಂಜಿ ಮತ್ತು ಶಿರಾ ಎಂಬ ಮೂರು ಶಂಕುಗಳನ್ನು ಈ ಪರ್ವತ ಹೊಂದಿದೆ. ಉತ್ತರ ಟಾಂಜೇನಿಯಾದ ಕೀನ್ಯಾ ಗಡಿ ಹತ್ತಿರ ಈ ಪರ್ವತ ಇದ್ದು ಪರ್ವತಾರೋಹಿಗಳಿಗೆ ವಿಶ್ವದಾದ್ಯಂತ ಜನಪ್ರಿಯ ತಾಣವಾಗಿದೆ.
ನೀತು ಚಂದನ್ ಅವರು ಲಿಮೋಶೊ ಮಾರ್ಗದ ಮೂಲಕ ತಮ್ಮ ೧೨ ಜನರ ಸದಸ್ಯರ ತಂಡದೊAದಿಗೆ ಸುಮಾರು ೫ ದಿನಗಳಲ್ಲಿ ಶಿಖರ ಏರಿದ್ದಾರೆ. ಇವರು ಗೋಣಿಕೊಪ್ಪದ ಚಿನ್ನದ ಮಳಿಗೆ ಮಾಲೀಕ ಎಂ.ಜಿ. ಮೋಹನ್ ಮತ್ತು ಸುನಂದ ಅವರ ಪುತ್ರಿ.