ಮಡಿಕೇರಿ, ಮಾ. ೧೭ : ಮಡಿಕೇರಿಯ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ೧೩೨ನೇ ವರ್ಷದ ಪರಾಭವ ನಾಮ ಸಂವತ್ಸರದ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ತಾ. ೧೯ ರಿಂದ ೨೮ ರವರೆಗೆ ಪ್ರತಿದಿನ ಸಂಜೆ ೬.೩೦ರಿಂದ ರಾತ್ರಿ ೮.೩೦ ರವರೆಗೆ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ತಾ.೧೯ ರಂದು ಪುಂಜಾಲಕಟ್ಟೆ ಕೃಷ್ಣ ಗೋಪಾಲ್ ಹಾಗೂ ಬಳಗದಿಂದ ಕರ್ನಾಟಕ ಶಾಸ್ತಿçÃಯ ವೇಣುವಾದನ, ತಾ.೨೦ ರಂದು ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಮೈಸೂರು ಇವರಿಂದ ಪೌರಾಣಿಕ ನಾಟಕಗಳ ರಂಗಗೀತೆ ಗಾಯನ, ತಾ. ೨೧ ರಂದು ಮಡಿಕೇರಿಯ ವಿದುಷಿ ಮೇಘಾ ಭಟ್ ಅವರಿಂದ ಶಾಸ್ತಿçÃಯ ಸಂಗೀತ, ತಾ.೨೨ ರಂದು ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯ ಪೂರ್ಣಿಮಾ ವಿನಯ್ ಶಿಷ್ಯರಿಂದ ನೃತ್ಯ ಸಂಗೀತ, ತಾ.೨೩ ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ, ತಾ.೨೪ ರಂದು ಮಡಿಕೇರಿಯ ಶ್ರುತಿ ಲಯ ತಂಡ, ವೀಣಾ ಹೊಳ್ಳರಿಂದ ಭಕ್ತಿ ಸಂಗೀತ, ತಾ.೨೫ ರಂದು ಬಾಳೆಲೆಯ ಕಾವೇರಿ ಕಲಾಸಮಿತಿ, ವತ್ಸಲಾ ನಾರಾಯಣ್ ಹಾಗೂ ಬಳಗದಿಂದ ಭಜನೆ, ಭಕ್ತಿ ಸಂಗೀತ, ತಾ.೨೬ ರಂದು ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯ ಪ್ರೇಕ್ಷಾ ಭಟ್ ಹಾಗೂ ಶಿಷ್ಯರಿಂದ ಭರತನಾಟ್ಯ, ತಾ.೨೭ ರಂದು ಶ್ರೀ ರಾಮನವಮಿ ವಿಶೇಷ ಪೂಜೆ, ಬೆಳಿಗ್ಗೆ ೧೧ ಗಂಟೆಯಿAದ ಮಡಿಕೇರಿಯ ಶಿವಶಕ್ತಿ ವೃಂದದಿAದ ಧಾರ್ಮಿಕ ಪಠಣ, ಸಂಜೆ ಮಂಗಳೂರಿನ ವಿದುಷಿ ಶ್ರೇಯಾ ಕೊಳತ್ತಾಯ, ಸುರತ್ಕಲ್ ಅವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, ತಾ. ೨೮ ರಂದು ಹನುಮಂತೋತ್ಸವ ವಿಶೇಷ ಪೂಜೆ, ಬೆಳಿಗ್ಗೆ ೧೧ ಗಂಟೆಯಿAದ ಗಾನಾಮೃತ ಕಾರ್ಯಕ್ರಮ ಹಾಗೂ ಸಂಜೆ ಮಂಗಳೂರಿನ ಯಕ್ಷಮಂಜುಳಾ ಮಹಿಳಾ ಬಳಗ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಬಾಲ ಪ್ರತಿಭೆಗಳಿಂದ ತಾಳಮದ್ದಳೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿದೆ.