ನಾಪೋಕ್ಲು, ಮಾ. ೧೭: ಕುಂದಲ್ಪಾಡಿ ಪೆರಾಜೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೨೦೨೪ -೨೫ರ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಭಾಜನವಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಇದಾಗಿದೆ. ಕುಂದಲ್ಪಾಡಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೨೦೦೪ರ ವರ್ಷದಲ್ಲಿ ಪ್ರಾರಂಭವಾಗಿದ್ದು, ಒಂದರಿAದ ಐದನೇ ತರಗತಿಯವರೆಗೆ ಇದೆ. ಆರಂಭದಿAದಲೂ ಇಲ್ಲಿನ ಎಸ್‌ಡಿಎಂಸಿ ಅವರು ಶಾಲಾ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಶಾಲೆಯಲ್ಲಿ ಉತ್ತಮವಾದ ಕೊಠಡಿಗಳಿದ್ದು ವಿಶಾಲ ಆಟದ ಮೈದಾನವಿದೆ. ಎಸ್‌ಡಿಎಂಸಿ ಅವರ ಶ್ರಮದಿಂದ ಶಾಲೆಯಲ್ಲಿ ವಿವಿಧ ರೀತಿಯ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುತ್ತಿದ್ದು ಶಾಲೆಯಲ್ಲಿ ಇಕೋ ಕ್ಲಬ್, ಕ್ರೀಡಾ ಸಂಘ, ವಿದ್ಯಾರ್ಥಿ ಪರಿಷತ್, ವಿಜ್ಞಾನ ಸಂಘಗಳಿವೆ. ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯ ವಿದ್ಯಾರ್ಥಿಗಳ ಸೇರುವಿಕೆ ಕಡಿಮೆ ಇದ್ದರೂ ಶಾಲೆ ವಿದ್ಯಾರ್ಥಿಗಳ ಸಮಿತಿ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಪೋಷಕರ, ಗ್ರಾಮಸ್ಥರ ಸಹಕಾರ ಈ ಶಾಲೆಗೆ ಇದೆ. ಶೈಕ್ಷಣಿಕ ಚಟುವಟಿಕೆ ಜೊತೆ ಸಹಪಠ್ಯ ಚಟುವಟಿಕೆಗಳು ನಡೆಯುತ್ತಾ ಇವೆ. ಎಲ್ಲಾ ಅಂಶಗಳನ್ನು ಗಮನಿಸಿ ಈ ಶಾಲೆಗೆ ಜಿಲ್ಲಾಮಟ್ಟದ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಬಂದಿದೆ.