ಮಡಿಕೇರಿ, ಮಾ. ೨೦: ಮುಸ್ಲಿಮ್ ಸಮುದಾಯದ ಪವಿತ್ರ ಹಬ್ಬವಾಗಿರುವ ರಂಜಾನ್ ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ಬೆಳಿಗ್ಗೆ ಈದ್ಗಾ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರಿಸಿ ೩೦ ದಿನಗಳ ಉಪವಾಸ ವ್ರತಾಚಾರಣೆಯನ್ನು ಮುಕ್ತಾಯಗೊಳಿಸಲಾಯಿತು. ಮುಸ್ಲಿಮರು ಹೊಸ ಉಡುಪು ಧರಿಸಿ, ಮನೆಗಳಲ್ಲಿ ಸಾಂಪ್ರದಾಯಿಕ ಹಾಗೂ ಬಗೆಬಗೆಯ ಖಾದ್ಯ ತಯಾರಿಸಿ ಅದನ್ನು ಹಂಚಿಕೆ ಮಾಡಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಂಜಾನ್ ಆಚರಣೆ ನಡೆಯಿತು. ಮಹದೇವಪೇಟೆಯ ಬದ್ರೀಯಾ ಮಸೀದಿಯಿಂದ ನಗರದ ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಿ ಈದ್ಗಾ ಮೈದಾನದಲ್ಲಿ ಕೊನೆಗೊಂಡಿತು. ಈದ್ಗಾ ಮೈದಾನದಲ್ಲಿ ಧರ್ಮಗುರು ಹಾಫೀಲ್ ನೌಷದ್ ಸಖಾಫಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.
ಧಾರ್ಮಿಕ ಉಪನ್ಯಾಸ
ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ಮಸ್ಜಿದ್ ಉರ್ ರಹ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಧಾರ್ಮಿಕ ಉಪನ್ಯಾಸ ನಡೆಯಿತು. ಕರುಣೆ, ಸಹನೆ, ಮತ್ತು ಪ್ರೀತಿಯ ಸಂಕೇತ ಈದುಲ್ ಫಿತರ್ ಹಬ್ಬವಾಗಿದೆ. ಪರಸ್ಪರ ಸಮಾಲೋಚನೆ, ಸಹಕಾರ ಮತ್ತು ಒಗ್ಗಟ್ಟಿನಿಂದ ಮುಂದೆ ಸಾಗಬೇಕಾಗಿದೆ ಎಂದು ಮಸ್ಜಿದ್ ಉರ್ ರಹ್ಮಾ ಧರ್ಮಗುರುಗಳಾದ ಉಮ್ಮರ್ ಮೌಲವಿ ಕರೆ ನೀಡಿದರು. ಈ ಸಂದರ್ಭ ಅಧ್ಯಕ್ಷ ಮೊಹಮ್ಮದ್ ಹನೀಫ್ ತೌಸೀಫ್, ಕಾರ್ಯದರ್ಶಿ ಎಂ.ಎ. ಮುಸ್ತಫ, ಪ್ರಮುಖರಾದ ಮೊಹಮ್ಮದ್ ಮುಸ್ತಫ, ಮುನೀರ್ ಅಹಮದ್, ಇಬ್ರಾಹಿಂ ಮೈಸ್, ಅಬ್ದುಲ್ಲಾ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಇಂದು ಕೂಡ ಹಬ್ಬ
ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಶಾಫಿ ಮುಸ್ಲಿಂ ಸಮುದಾಯದವರು ಶುಕ್ರವಾರ ರಂಜಾನ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದೊಂದಿಗೆ ಆಚರಿಸಿದರು. ೨೯ ದಿನಗಳ ಉಪವಾಸದ ಬಳಿಕ ನಿನ್ನೆ ಸಂಜೆ ಕೇರಳದಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರÀ ಹಬ್ಬ ಆಚರಣೆ ನಡೆಯಿತು. ಜಿಲ್ಲೆಯ ಹನಫಿ ಮುಸ್ಲಿಂ ಸಮುದಾಯದವರು ತಾ. ೨೧ ರಂದು (ಇಂದು) ಹಬ್ಬ ಆಚರಿಸಲಿದ್ದಾರೆ. ೪ಏಳನೇ ಪುಟಕ್ಕೆ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ಬಜೆಗುಂಡಿ ಖಿಳಾರಿಯಾ ಜುಮಾ ಮಸೀದಿಯಲ್ಲಿ ಈದ್ ಉಲ್ ಫಿತರ್ ಆಚರಣೆ ಸಂಭ್ರಮದಿAದ ನಡೆಯಿತು. ಜುಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಬೆಳಿಗ್ಗೆ ಮಸೀದಿನಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆ ಮಾಡಿದರಲ್ಲದೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಜಮಾಅತ್ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ ವಿಶ್ವ ಶಾಂತಿಗಾಗಿ ಸರ್ವರೂ ಪ್ರಾರ್ಥಿಸೋಣ. ವಿಶ್ವದ ಎಲ್ಲೆಡೆ ಆವರಿಸಿರುವ ಯುದ್ಧ ಭೀತಿ ಮುಕ್ತಾಯವಾಗಿ ಸರ್ವರೂ ನೆಮ್ಮದಿ, ಶಾಂತಿಯಿAದ ಜೀವನ ನಡೆಸುವಂತಾಗಲಿ ಎಂದು ಆಶಿಸಿದರು.
ಜಮಾಅತ್ ಖತೀಬರಾದ ಉಬೈದ್ ಫೈಝಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭ ಜಮಾಅತ್ ಕಮಿಟಿ ಸದಸ್ಯರು, ಮುಸ್ಲಿಂ ಸಮುದಾಯದವರು ಉಪಸ್ಥಿತರಿದ್ದರು.
ಇದರೊಂದಿಗೆ ಕಲ್ಕಂದೂರು, ಹೊಸತೋಟ, ಪಟ್ಟಣದ ಜಲಾಲಿಯಾ, ಕಾಗಡಿಕಟ್ಟೆ, ತಣ್ಣೀರುಹಳ್ಳದ ಮಸೀದಿಗಳಲ್ಲೂ ರಂಜಾನ್ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಕೊಡ್ಲಿಪೇಟೆ: ಕೊಡ್ಲಿಪೇಟೆ ಸಮೀ ಪದ ಹ್ಯಾಂಡ್‌ಪೋಸ್ಟ್ನಲ್ಲಿರುವ ಮಸ್ಜಿದುನ್ನೂರ್ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.
ಗುರುವಾರ ಸಂಜೆ ಕೇರಳ ದಲ್ಲಿ ಚಂದ್ರದರ್ಶನವಾಗಿರುವ ಕುರಿತು ಖಾಝಿಗಳು ಪ್ರಕಟಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಮಸ್ಜಿದುನ್ನೂರ್‌ನಲ್ಲಿ ಜಮಾಯಿಸಿದ ಸಮುದಾಯದವರು, ಪ್ರಾರ್ಥನೆ ಸಲ್ಲಿಸಿ ಈದ್ ಆಚರಿಸಿ ಸಂಭ್ರಮಿಸಿದರು.
ಸಾಮೂಹಿಕ ಪ್ರಾರ್ಥನೆಯ ನಂತರ ಮಸೀದಿ ಸಮೀಪದಲ್ಲಿರುವ ಖಬರ್‌ಸ್ಥಾನಕ್ಕೆ ತೆರಳಿ ಅಗಲಿದವರಿಗಾಗಿ ಪ್ರಾರ್ಥಿಸಿದರು.
ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಮುಖ್ಯ ಧರ್ಮಗುರುಗಳಾದ ಮಹಮ್ಮದ್ ಶಾಫಿ ಫೈಝಿ ಅವರು ದಿನದ ಮಹತ್ವದ ಕುರಿತು ಸಂದೇಶ ನೀಡಿದರು. ಧರ್ಮಗುರುಗಳಾದ ರಜಾಕ್ ಫೈಝಿ, ಮುಸ್ತಫ ಮುಸ್ಲಿಯಾರ್, ಜಹೀರ್ ನಿಜಾಮಿ, ಸ್ವಾಲೀಹ್ ರಹ್ಮಾನಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದೀಕ್ ಹಾಜಿ, ಉಪಾಧ್ಯಕ್ಷ ಸುಲೈಮಾನ್, ಸಲಹಾ ಸಮಿತಿ ಸದಸ್ಯರುಗಳಾದ ಸುಲೈಮಾನ್, ಇಬ್ರಾಹಿಂ, ಅಬ್ದುಲ್ ಮಜೀದ್, ಕಾರ್ಯದರ್ಶಿ ಮಹಮ್ಮದ್ ಹನೀಫ್, ಖಜಾಂಜಿ ಬಾಸಿತ್, ಉಪ ಕಾರ್ಯದರ್ಶಿಗಳಾದ ಮುನೀರ್, ರಶೀದ್, ಸದಸ್ಯರುಗಳಾದ ಸಾಬ್ಜಾನ್, ಜಖಾರಿಯಾ, ಹಮೀದ್, ಅಜೀಜ್, ಖಾದರ್, ರಹೀಂ ಅಶ್ರಫ್, ಯೂತ್ ಸಮಿತಿ ಅಧ್ಯಕ್ಷ ಬಾಸಿತ್ ಹಾಜಿ ಸೇರಿದಂತೆ ಇತರರು ಇದ್ದರು.ಕುಶಾಲನಗರ: ರಂಜಾನ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಆಚರಿಸಲಾಯಿತು. ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಝಿ ಇರ್ಫಾನಿ ಅವರು ಧಾರ್ಮಿಕ ಸಂದೇಶ ನೀಡಿದರು.
ಈ ಸಂದರ್ಭ ಹಿಲಾಲ್ ಮಸೀದಿ ಅಧ್ಯಕ್ಷ ರಫೀಕ್ ಹಾಗೂ ಕಾರ್ಯದರ್ಶಿ ಕರೀಂ, ಹಿಲಾಲ್ ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಇದ್ದರು. ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಸುಂಟಿಕೊಪ್ಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.ಪೊನ್ನಂಪೇಟೆ: ರಂಜಾನ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಲೋಕದ ಒಳಿತಿಗಾಗಿ ಅಲ್ಲಾನಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಮನುಕುಲಕ್ಕೆ ಶಾಂತಿ ಸೌಹಾರ್ದತೆಯ ಸಂದೇಶ ನೀಡಲಾಯಿತು. ಈ ಸಂದರ್ಭ ಮಸೀದಿ ಅಧ್ಯಕ್ಷ ಅಹಮದ್ ಹಾಜಿ, ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಕಾರ್ಯದರ್ಶಿ ಅಜೀಜ್, ಉಸ್ತಾದ್ ಸೂಫಿ ಧಾರಿಮಿ, ಪದಾಧಿಕಾರಿಗಳು ಹಾಗೂ ಇನ್ನಿತರರು ಇದ್ದರು. ಕಾಟ್ರಕೊಲ್ಲಿ ಹಾಗೂ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿರುವ ಮಸೀದಿಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಯಿತು.ಕಡಂಗ: ಕೊಡಗಿನ ಪ್ರಮುಖ ದರ್ಗಾ ಕೇಂದ್ರವಾದ ಎಮ್ಮೆಮಾಡುವಿನಲ್ಲಿ ಸಂಭ್ರಮ- ಸಡಗರದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಜುಮಾ ಮಸೀದಿಯಲ್ಲಿ ಈದ್ ನಮಾಝ್‌ಗೆ ಕತೀಬ್ ಹಾಫಿಜ್ ರಸೀಕ್ ಫೈಜಿ ಉಸ್ತಾದ್ ನೇತೃತ್ವ ವಹಿಸಿದರು. ಬಳಿಕ ಸೂಫಿ ಶಹೀದ್ ದರ್ಗಾಕ್ಕೆ ತೆರಳಿ ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಜಮಾಅತ್ ಅಧ್ಯಕ್ಷರು ಮತ್ತು ಜಮಾಅತ್ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಕಡಂಗ: ಕಡಂಗದಲ್ಲಿ ಸಂಭ್ರಮ, ಸಡಗರದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ನಮಾಝ್‌ಗೆ ರಫೀಕ್ ಲತೀಫಿ ನೇತೃತ್ವ ವಹಿಸಿದರು. ಬಳಿಕ ಕೊಕ್ಕಂಡಬಾಣೆ ದರ್ಗಾಕ್ಕೆ ತೆರಳಿ ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಜಮಾಅತ್ ಅಧ್ಯಕ್ಷರು ಮತ್ತು ಜಮಾಅತ್ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪ್ರಾರ್ಥನೆ ನೆರವೇರಿತು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮಾ ಮಸೀದಿಯಲ್ಲಿ ಇಬ್ರಾಹಿಂ ಅತನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್‌ನಲ್ಲಿ ಹಫೀಜ್ ಜುಬೇರ್, ಸುನ್ನಿ ಶಾಫಿ ಜುಮಾ ಮಸೀದಿಯಲ್ಲಿ ಮೌಲವಿ ಸಾಲಿಮ್, ಕೂಬ ಮಸೀದಿಯಲ್ಲಿ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸೀದಿಯಲ್ಲಿ ಅಬ್ಧುಲ್ ಅಜೀಜ್ ಸಖಾಫಿ ಅವರುಗಳು ಹಬ್ಬದ ವಿಶೇಷ ಧಾರ್ಮಿಕ ಪ್ರವಚ ಖುರಾನ್ ಪಠಣ ಸೇರಿದಂತೆ ಪ್ರಾರ್ಥನೆಯನ್ನು ಸಲ್ಲಿಸಿದರು.
ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‌ಉಲ್ ಪಿತ್ತರ್ ಅಂಗವಾಗಿ ನಿಶಾದ್ ಸ್ವಲಾಹಿ ನೇತೃತ್ವದಲ್ಲಿ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಚೆಟ್ಟಳ್ಳಿ, ಮಾ. ೨೦: ಸಮೀಪದ ಕಂಡಕರೆಯಲ್ಲಿ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಫಿತ್ರ್ ಸಂಭ್ರಮ-ಸಡಗರದಿAದ ಆಚರಿಸಲಾಯಿತು. ವೀರಾಜಪೇಟೆ: ವೀರಾಜಪೇಟೆ ವ್ಯಾಪ್ತಿಯಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲಾಯಿತು.
ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ.ಹ್ಯಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಮೌ.ಶುಹೈಬ್ ಫೈಝಿ, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಬಾದ್‌ಷಾ ಮಸೀದಿಯಲ್ಲಿ ಮೌ.ಮಖ್ಸೂದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೌ.ಮೊಹಮ್ಮದ್ ಅಲಿ ಬಾಖವಿ, ಪೆರಂಬಾಡಿಯ ಮಸ್ಜಿದುಲ್ ಖಿಝರ್‌ನಲ್ಲಿ ಮುಸ್ತಫಾ ಫೈಝಿ, ಮೀನುಪೇಟೆಯ ಮಸ್ಜಿದುನ್ನೂರ್‌ನಲ್ಲಿ ಮೌ.ಮಾಹಿನ್ ದಾರಿಮಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ನೀಡಿದರು.
ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೆöÊಟ್ ಕ್ಯಾಂಪಸ್ ಈದ್ಗಾನಲ್ಲಿ ಮೌ.ಕೆ.ಎಂ.ಇಬ್ರಾಹಿಮ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್ಗಾನಲ್ಲಿ ಮೌ. ಅಸ್ಲಮ್ ಸಲಫಿಯವರು ಪ್ರವಚನ ಮತ್ತು ನಮಾಝ್‌ಗೆ ನೇತೃತ್ವ ನೀಡಿದರು.
ಕಂಡಕರೆಯ ಮಸ್ಜಿದ್ ತಖ್ವಾದಲ್ಲಿ ಈದ್ ನಮಾಜ್‌ಗೆ ಮಹಲ್ ಖತೀಬರಾದ ಸುಫಿಯಾನ್ ಸಹದಿ ಅವರು ನೇತೃತ್ವ ವಹಿಸಿದ್ದರು. ನಂತರ ಕಂಡಕರೆಯ ಖಬರಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಮುಸ್ಲಿಂ ಬಾಂಧವರು ಪರಸ್ಪರ ಹಸ್ತಲಾಘವ ಮಾಡುವುದರ ಮೂಲಕ ಈದ್ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಕಂಡಕರೆ ಮಹಲ್ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಹಾಜಿ, ಕಾರ್ಯದರ್ಶಿ ಶರ್ಫುದ್ದೀನ್, ಸಹ ಕಾರ್ಯದರ್ಶಿ ಗಫೂರ್, ಉಪಾಧ್ಯಕ್ಷರಾದ ಕೆ.ಎ ಹುಸೈನ್, ಸೈಫುದ್ದೀನ್ ಸಖಾಫಿ ಇದ್ದರು.ಚೆಯ್ಯಂಡಾಣೆ: ಎಡಪಾಲದಲ್ಲಿ ಸಂಭ್ರಮ- ಸಡಗರದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಎಡಪಾಲ ಜುಮಾ ಮಸೀದಿಯಲ್ಲಿ ಈದ್ ನಮಾಝ್‌ಗೆ ಮುದರ್ರಿಸ್ ಶೈಖುನಾ ನಿಝಾರ್ ಫೈಝಿ ನೇತೃತ್ವ ವಹಿಸಿದ್ದರು. ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ನೇತೃತ್ವದಲ್ಲಿ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಝಿಯಾರತ್ ನಡೆಸಿ ಶಾಂತಿ,ನೆಮ್ಮದಿ, ಸೌಹಾರ್ದತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಪೊಯಾಪಳ್ಳಿ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ಕೆ.ಎ.,ಉಪಾಧ್ಯಕ್ಷ ಉಮ್ಮರ್ ಹಾಜಿ, ಪ್ರಧಾನ ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಮೊಹಮ್ಮದ್, ಜಮಾಅತ್ ಪದಾಧಿಕಾರಿಗಳು ಮತ್ತಿತರರು ಇದ್ದರು. ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಸಡಗರ ಸಂಭ್ರಮದಿAದ ಈದುಲ್ ಫಿತ್ರ್ ಆಚರಿಸಲಾಯಿತು.
ಇಲ್ಲಿಯ ಮೋಹಿಯದ್ದಿನ್ ಜುಮಾ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಅವರು ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಪಿ.ಎಂ. ಬದ್ರುದ್ದೀನ್, ಪಿ.ಎಂ. ಅರಫತ್, ಕಾರ್ಯದರ್ಶಿ ಪಿ.ಎಂ. ಯೂನಸ್, ಖಜಾಂಚಿ ಅಬ್ದುಲ್ ರೆಹಮಾನ್ ಹಾಜಿ. ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದರು. ಚೆಯ್ಯಂಡಾಣೆ: ನಾಪೋಕ್ಲುವಿನ ಮದೀನ ಮಸೀದಿಯಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.
ಮಸೀದಿಯ ಧರ್ಮಗುರುಗಳಾದ ಶೇಕ್ ಮೌಲಾನ ಹೈದರಲಿ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿಸಲಾಯಿತು. ಬಳಿಕ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷ ವಾಸಿಮ್ ಕ್ಲಾಸಿಕ್, ಕಾರ್ಯದರ್ಶಿ ನಝೀರ್ ಹಾಜಿ, ವಕೀಲ ರಿಯಾಝ್, ಅಬ್ದುಲ್ ಗಫೂರ್ ಹಾಜಿ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಝಹೀರ್ ಖಾನ್, ಪ್ರಮುಖರಾದ ರೋಷನ್, ಯಾಸೀನ್ ಸಾಹೇಬ್, ಲಿಯಾಖತ್ ಅಲಿ ಹಾಜಿ, ಅಬ್ದುಲ್ ಜಬ್ಬಾರ್ ಸಾಹೇಬ್, ಅಝೀಝ್ ಮಾಸ್ಟರ್, ಝಮೀರ್ ಖಾನ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು. ಚೆಯ್ಯಂಡಾಣೆ: ಹಳೇ ತಾಲೂಕಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹಳೇ ತಾಲೂಕು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಖಾಲಿದ್ ಹಿಮಮಿ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿತು. ಬಳಿಕ ಖಬರ್ ಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಜಮಾಅತ್ ಅಧ್ಯಕ್ಷ ಟಿ.ಎ.ಮೊಹಮ್ಮದ್, ಕಾರ್ಯದರ್ಶಿ ಅಬ್ದುಲ್ ಖಾದರ್, ಮದರಸ ಅಧ್ಯಾಪಕರು ಸೇರಿದಂತೆ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಬದ್ರಿಯಾ ಮಸೀದಿಯ ಸದಸ್ಯರು ಪಾಲ್ಗೊಂಡಿದ್ದರು.