ಮಡಿಕೇರಿ, ಮಾ.೨೩: ಕಾಡಾನೆ ಧಾಳಿಯಿಂದ ಸಂಭವಿಸಿದ ಸಾವಿಗೆ ಸಂಬAಧಿಸಿದAತೆ ಬಿಜೆಪಿಯಿಂದ ನಡೆದ ಪ್ರತಿಭಟನೆ ಕುರಿತು ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಅವರು ನೀಡಿರುವ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಕಾಡಾನೆಯಿಂದ ಸಾವುಗಳು ಸಂಭವಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾವಿಗೀಡಾದವರಿಗೆ ನ್ಯಾಯ ಒದಗಿಸಬೇಕು. ಈ ರೀತಿಯ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಬಿಜೆಪಿ ಪ್ರತಿಭಟನೆ ನಡೆಸಿದೆ. ಜನರಿಗೆ ಸಮಸ್ಯೆ ಆದಾಗ ಹೋರಾಟ ಮಾಡುವುದು ಪ್ರಜಾಪ್ರಭುತ್ವದ ಹಕ್ಕಾಗಿದೆ. ಹೀಗಿರುವಾಗ ಬಿಜೆಪಿಯ ಪ್ರತಿಭಟನೆ ಸಾವಿನ ಮೇಲಿನ ರಾಜಕಾರಣ ಎಂದು ಪೊನ್ನಣ್ಣ ಅವರು ಹೇಳಿರುವುದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದೆ ಎಂದರು. ನಮ್ಮ ಪ್ರತಿಭಟನೆ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಸಭೆ ನಡೆಸಿದ್ದಾರೆ. ಆದರೆ ಜಿಲ್ಲೆಯ ಸಮಸ್ಯೆಯ ಬಗ್ಗೆ ಎಲ್ಲಾ ಪಕ್ಷದವರನ್ನು ಸಂಘಟನೆಗಳ ಪ್ರಮುಖರನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸುವಂತೆ ನಾವು ಆಗ್ರಹಿಸಿದ್ದರೂ ನಮ್ಮ ಆಗ್ರಹಕ್ಕೆ ಮನ್ನಣೆ ನೀಡಿಲ್ಲ ಎಂದು ದೂರಿದರು.
ಆನೆ ಯೋಜನೆ, ಹುಲಿ ಯೋಜನೆಯಡಿ ಕೇಂದ್ರ ಸರ್ಕಾರ ರೂ. ೨೯೦ ಕೋಟಿ ಅನುದಾನ ಮೀಸಲಿಟ್ಟಿದ್ದು ಕೇರಳ ರಾಜ್ಯಕ್ಕೆ ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರಕ್ಕೆ ನೀಡಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ. ಕೇರಳದಲ್ಲಿ ಬಿಜೆಪಿ ಆಡಳಿತವಿಲ್ಲ. ಕಮ್ಯುನಿಸ್ಟ್ ಆಡಳಿತವಿದ್ದು ಕೇಂದ್ರದಿAದ ಅನುದಾನ ಪಡೆಯುವಲ್ಲಿ ಅಲ್ಲಿನ ಸರ್ಕಾರ ಸಫಲವಾಗಿರುವಾಗ ಇಲ್ಲಿನ ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ರವಿ ಕಾಳಪ್ಪ ಇಲ್ಲಿನ ಶಾಸಕರು ಹಾಗೂ ಅರಣ್ಯ ಸಚಿವರು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಕೇಂದ್ರದೊAದಿಗೆ ವ್ಯವಹರಿಸಿ ಅನುದಾನ ತರುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ನಾಪೋಕ್ಲು ಸರ್ಕಾರಿ ಕಾಲೇಜಿಗೆ ಸಂಬAಧಪಟ್ಟ ಜಾಗದಲ್ಲಿ ಅನಧಿಕೃತವಾಗಿ ಶಾದಿಮಹಲ್ ನಿರ್ಮಾಣಕ್ಕೆ ಮುಂದಾದಾಗ ಬಿಜೆಪಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರ್ವೇ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರಾದರೂ ಇದುವರೆಗೂ ಸರ್ವೇ ಕಾರ್ಯ ನಡೆದಿಲ್ಲ. ಇದು ಖಂಡನೀಯ ಎಂದು ರವಿಕಾಳಪ್ಪ ನುಡಿದರು. ೪ಐದನೇ ಪುಟಕ್ಕೆ
ಜಮ್ಮಾ ಸಮಸ್ಯೆ ಪರಿಹಾರ, ಕೊಡವ ಅಭಿವೃದ್ಧಿ ನಿಗಮ, ಕೊಡವ ಫೆಡರೇಷನ್ ಹಾಗೂ ಸಮಾಜಗಳಿಗೆ ರೂ.೧೦ ಕೋಟಿ ಅನುದಾನ, ಭಾಗಮಂಡಲ ಮೇಲ್ಸೇತುವೆೆ, ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ, ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಛೇರಿ ಸೇರಿದಂತೆ ಇನ್ನೂ ಹಲವಾರು ಯೋಜನೆಗಳು ನಮ್ಮ ಶಾಸಕರುಗಳ ಅವಧಿಯಲ್ಲಿ ಜಾರಿಯಾಗಿದ್ದು ಉದ್ಘಾಟನೆಯನ್ನು ಮಾತ್ರ ಈಗಿನ ಶಾಸಕರುಗಳು ಮಾಡುತ್ತಿದ್ದಾರೆ ಎಂದು ದೂರಿದರು. ಅಡುಗೆ ಅನಿಲ ವಿಚಾರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಕಾಂಗ್ರೆಸ್‌ಗೆ ಲೋಕಜ್ಞಾನವಿಲ್ಲ ಎಂದು ಟೀಕಿಸಿದ ಬಿಜೆಪಿ ಅಧ್ಯಕ್ಷರು ಯುದ್ಧಗಳಿಂದಾಗಿ ಸಮಸ್ಯೆಗಳಾಗುತ್ತವೆ, ಎಲ್ಲದರಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್‌ನ ನಿಲುವು ಸರಿಯಲ್ಲ ಎಂದು ನುಡಿದರು.
ಆನೆ ಕಂದಕಗಳ ದುರಸ್ತಿ ನಡೆಯುತ್ತಿಲ್ಲ
ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ರಸ್ತೆಗಳಲ್ಲಿ ಗ್ಯಾಸ್ ಇಟ್ಟು ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ ರಸ್ತೆಗಳನ್ನು ಹಾಳು ಮಾಡುತ್ತಿದೆ. ಅಡುಗೆ ಅನಿಲವನ್ನು ಪ್ರಧಾನಿಯವರು ತಮ್ಮ ಸ್ವಂತ ವರ್ಚಸ್ಸಿನಿಂದ ಭಾರತಕ್ಕೆ ತರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಅವಧಿಯಲ್ಲಿಯೇ ಕಾಡಾನೆಗಳಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದ ಅವರು ಆನೆ ಕಂದಕಗಳನ್ನು ದುರಸ್ತಿ ಮಾಡುವ ಕೆಲಸ ಪ್ರಸ್ತುತ ಸಮರ್ಪಕವಾಗಿ ನಡೆಯದ ಕಾರಣ ಆನೆಯಿಂದ
(ಮೊದಲ ಪುಟದಿಂದ) ಸಾವು-ನೋವುಗಳು ಹೆಚ್ಚಾಗುತ್ತಿವೆ. ನಮ್ಮ ಅವಧಿಯಲ್ಲಿ ಆನೆ ಕಂದಕಗಳ ದುರಸ್ತಿ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದೆವು ಎಂದರು. ನಮ್ಮ ಆವಧಿಯಲ್ಲಿ ಆನೆ - ಮಾನವ ಸಂಘರ್ಷ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂ.೧,೫೦೦ ಕೋಟಿಯ ನೀಲಿ ನಕ್ಷೆಯೊಂದನ್ನು ತಯಾರು ಮಾಡಿದ್ದೆವು ಅದನ್ನು ಜಾರಿಗೊಳಿಸಿದರೆ ಆನೆ-ಮಾನವ ಸಂಘರ್ಷವನ್ನು ತಡೆಯಬಹುದಾಗಿದೆ ಎಂದ ಅವರು ನಮ್ಮ ಸರ್ಕಾರವಿದ್ದಾಗಲೆ ಜಮ್ಮಾ ಸಮಸ್ಯೆ ಶೇ.೯೫ರಷ್ಟು ಭಾಗ ಪರಿಹಾರವಾಗಿತ್ತು ಎಂದರಲ್ಲದೆ ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದವರಲ್ಲಿ ಬಹುತೇಕರು ಕಾಂಗ್ರೆಸ್‌ನವರೆ ಎಂದು ಹೇಳಿದರು. ರಾಜ್ಯ ಸರ್ಕಾರ ಜನ ವಿರೋಧಿಯಾಗಿದ್ದು ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿಪಕ್ಷಕ್ಕೂ ಬೆಲೆ ಇದೆ
ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಗಲ್ಫ್ ರಾಷ್ಟçಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೆ ನಾವು ಕಾರಣರಲ್ಲ, ಹೀಗಿದ್ದರೂ ಕೂಡ ಪ್ರಧಾನಿ ಮೋದಿ ಅವರು ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬAಧ ಹೊಂದಿ ಯುದ್ಧದಿಂದ ಭಾರತಕ್ಕೆ ತೊಂದರೆಯಾಗದAತೆ ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕಾಗಿದ್ದು ವಿಪಕ್ಷಕ್ಕೂ ಅದರದ್ದೆ ಆದ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಹೋರಾಟಕ್ಕೂ ಮನ್ನಣೆ ನೀಡಬೇಕು, ಎಲ್ಲರ ಸಲಹೆ ಸೂಚನೆ ಪಡೆದು ಆಡಳಿತ ಪಕ್ಷ ಕೆಲಸ ಮಾಡಬೇಕು ಎಂಬುದಷ್ಟೇ ನಮ್ಮ ಆಶಯ ಎಂದು ನುಡಿದರು.
ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಾಧ್ಯಮ ಪ್ರಮುಖ್ ಸಜೀಲ್ ಕೃಷ್ಣನ್ ಉಪಸ್ಥಿತರಿದ್ದರು.