ಬೆಂಗಳೂರು, ಮಾ. ೨೩: ಪಶ್ಚಿಮ ಏಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಎದುರಾದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಹಾರ ಪೂರೈಕೆ ಆಧರಿತ ವಾಣಿಜ್ಯೋದ್ಯಮಿಗಳಿಗೆ ೧೦ ಸಾವಿರ ಸಿಲಿಂಡರ್ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಅವರು ಸೋಮವಾರ ತಿಳಿಸಿದ್ದಾರೆ.

ಅನಿಲ ಅಭಾವದ ಹಿನ್ನೆಲೆಯಲ್ಲಿ ಇಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಗೇಲ್, ಹಾಗೂ ಭಾರತ್ ಪೆಟ್ರೋಲಿಯಂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಣಿಜ್ಯ ಬಳಕೆಯ ಸಿಲಿಂಡರ್ ಬಳಸುವ ಮಂದಿ ಬಂದು ವಾರದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಮೊದಲು ನಿತ್ಯ ೭ ಸಾವಿರ ವಾಣಿಜ್ಯ ಸಿಲಿಂಡರ್ ನೀಡುತ್ತಿದ್ದು, ಅದನ್ನು ಇಂದಿನಿAದ ಹೆಚ್ಚಿಸಲಾಗಿದೆ. ಸದ್ಯ ಹೊಟೇಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಆಸ್ಪತ್ರೆ ಗಳಿಗೆ ಪೂರೈಕೆ ಮಾಡಲು ಪ್ರತಿ ನಿತ್ಯ ೧೦ ಸಾವಿರ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲಾಗುವುದು. ಹೀಗಾಗಿ ವಾಣಿಜ್ಯ ಸಿಲಿಂಡರ್ ಬಳಕೆದಾರರು ಗೇಲ್(ಉಚಿs ಂuಣhoಡಿiಣಥಿ oಜಿ Iಟಿಜiಚಿ ಐimiಣeಜ) ಕಂಪನಿಯೊAದಿಗೆ ನೋಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ಭಾರತೀಯ ಅನಿಲ ಪೂರೈಕೆ ಪ್ರಾಧಿಕಾರ (ಗೇಲ್) ಕಂಪನಿಯಲ್ಲಿ ಒಂದು ವಾರದೊಳಗೆ ವಾಣಿಜ್ಯ ಸಿಲಿಂಡರ್ ಬಳಕೆದಾರರು ನೋಂದಣಿ ಮಾಡಿಕೊಳ್ಳಬೇಕು; ಎಲ್ಲರೂ ಸಹಕಾರ ನೀಡಿದರೆ ಅಡುಗೆ ಅನಿಲ ಸಮಸ್ಯೆ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದರು. ವಾಣಿಜ್ಯ ಸಿಲಿಂಡರ್ ಬಳಕೆದಾರರು ನೊಂದಣಿ ಮಾಡಿಕೊಳ್ಳದಿದ್ದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾರು ಎಷ್ಟು ಬಳಕೆ ಮಾಡ್ತಿದ್ದಾರೆ ಎನ್ನುವ ಮಾಹಿತಿಗಾಗಿ ಮುಂದಿನ ಶನಿವಾರದೊಳಗೆ ನೊಂದಣಿ ಕಡ್ಡಾಯವಾಗಿದೆ ಎಂದಿದ್ದಾರೆ. ವಿನಾಕಾರಣ ಅನಿಲ ವಿತರಣೆ ಮಾಡುವವರ ಮೇಲೆ ಯಾರು ಒತ್ತಡ ಹೇರಬಾರದು. ಸದ್ಯ ಎದುರಾಗಿರುವ ಸಮಸ್ಯೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಮುಖ್ಯಮAತ್ರಿ ಸಿದ್ದರಾಮಯ್ಯ ಅವರು ಸಿಲಿಂಡರ್ ಅಭಾವದ ಕುರಿತು ಕೇಂದ್ರಕ್ಕೆ ಎರಡನೇ ಪತ್ರ ಬರೆದ ಬಳಿಕ ಇದೀಗ ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದು, ಇದುವರೆಗೂ ನಿತ್ಯ ೯೦೦೦ ಸಿಲಿಂಡರ್ ಪೂರೈಕೆ ಮಾಡುತ್ತಿದ್ದು ಇದೀಗ ಹೆಚ್ಚುವರಿ ಶೇ. ೨೦ ರಷ್ಟು ಸಿಲಿಂಡರ್ ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ಮುಂದಿನ ಸೋಮವಾರ ಮತ್ತೊಮ್ಮೆ ಸಭೆ ಸೇರಿ ಪರಾಮರ್ಶೆ ನಡೆಸಲಾಗುವುದು ಎಂದು ತಿಳಿಸಿದರು.

ವಾಣಿಜ್ಯ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಹಾಗೂ ಅಧಿಕೃತವಲ್ಲದ ಮಾರುಕಟ್ಟೆಗೆ ಸಿಲಿಂಡರ್‌ಗಳು ಹೋಗುವುದನ್ನು ತಡೆಯಲು ಕೇಂದ್ರವು ನಿರ್ಣಯ ಕೈಗೊಂಡಿದೆ. ಅದರಂತೆ, ಎಲ್ಲಾ ವಾಣಿಜ್ಯ ಬಳಕೆದಾರರು, ಮುಖ್ಯವಾಗಿ ಹೊಟೇಲ್‌ಗಳು, ಸಣ್ಣ ಕೈಗಾರಿಕೆಗಳು ಒಂದು ವಾರದೊಳಗೆ ಗೇಲ್ ಕಂಪನಿಯೊAದಿಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಈ ಕ್ರಮದಿಂದ ಕಪ್ಪು ಮಾರುಕಟ್ಟೆಯನ್ನು ತಡೆಯಬಹುದು ಮತ್ತು ಮುಂದಿನ ದಿನಗಳಲ್ಲಿ ಗೇಲ್ ಪೈಪ್‌ಲೈನ್ ಮೂಲಕ ಹೆಚ್ಚಿನ ಎಲ್‌ಪಿಜಿ ಪೂರೈಕೆಗೆ ಅವಕಾಶವಾಗಲಿದೆ. ಈ ಹೆಚ್ಚುವರಿ ಪೂರೈಕೆಯು ರಾಜ್ಯದಲ್ಲಿ ವಾಣಿಜ್ಯ ಬಳಕೆದಾರರ ಬೇಡಿಕೆಯನ್ನು ಪೂರೈಸಲು ಸಹಾಯಕವಾಗಲಿದೆ. ಸದ್ಯಕ್ಕೆ, ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು ೧೫,೦೦೦ ರಿಂದ ೧೬,೦೦೦ ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್‌ನಲ್ಲೂ ಉತ್ತರ

ಈ ಕುರಿತು ಇಂದು ವಿಧಾನ ಪರಿಷತ್‌ನಲ್ಲೂ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸಚಿವರು, ಈಗ ಆಟೋ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಗ್ಯಾಸ್ ಸೇರಿದಂತೆ ವಿವಿಧ ವಲಯಗಳನ್ನು ಸೇರಿಸಿ ಪ್ರತಿದಿನ ಸುಮಾರು ೧೫,೦೦೦-೧೬,೦೦೦ ವಾಣಿಜ್ಯ ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗುವುದು ಎಂದರು

ಈ ಹೊಸ ವ್ಯವಸ್ಥೆಯಡಿಯಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕ್ಯಾಂಟೀನ್‌ಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ೪,೨೦೦ ಸಿಲಿಂಡರ್, ಸರ್ಕಾರಿ ವ್ಯವಸ್ಥೆಗೆ ೧,೨೦೦ ಸಿಲಿಂಡರ್ ನೀಡಲಾಗುತ್ತಿದೆ. ಹೊಟೇಲ್‌ಗಳಿಗೆ ಪ್ರತಿನಿತ್ಯ ಸುಮಾರು ೧೦,೦೦೦ ಸಿಲಿಂಡರ್ ಹಂಚಿಕೆ ಮಾಡಲಾಗುತ್ತದೆ ಎಂದು ವಿವರ ನೀಡಿದರು.

ಇದು ಅವರ ಸಾಮಾನ್ಯ ಬಳಕೆಯ ಕೇವಲ ಶೇ.೨೦ರಷ್ಟು ಮಾತ್ರವೇ ಆಗಿದೆ. ಹಿಂದೆ ವಾರಕ್ಕೆ ಐದು ಸಿಲಿಂಡರ್ ಬಳಸುತ್ತಿದ್ದ ಹೊಟೇಲ್‌ಗಳು ಈಗ ಒಂದು ಸಿಲಿಂಡರ್‌ನಲ್ಲೇ ಕೆಲಸ ನಡೆಸಿಕೊಳ್ಳಬೇಕು. ಇದು ತಾತ್ಕಾಲಿಕ ಕ್ರಮವಾದರೂ ಅನಿವಾರ್ಯ ಎಂದು ಸಚಿವರು ತಿಳಿಸಿದರು. ಈ ನಡುವೆ ಕೃಷಿ ಚಟುವಟಿಕೆಗಳು, ಬೀಜ ಸಂಸ್ಕರಣೆ ಮತ್ತು ಔಷಧ ತಯಾರಿಕೆಗಾಗಿ ದಿನಕ್ಕೆ ೫೦೦ ಸಿಲಿಂಡರ್ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಜೊತೆಗೆ ತುರ್ತು ಪರಿಸ್ಥಿತಿಗಳಿಗೆ ೨೦೫ ಸಿಲಿಂಡರ್‌ಗಳನ್ನು ಕಾಯ್ದಿರಿಸಲಾಗಿದೆ ಎಂದರು. ನಗರ ಪ್ರದೇಶಗಳಲ್ಲಿ ೨೫ ದಿನಕ್ಕೊಮ್ಮೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೪೦ ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಾಗಿ ಸಚಿವರು ತಿಳಿಸಿದ್ದು, ಇದರಿಂದ ಎಲ್ಲರಿಗೂ ಸಮಾನವಾಗಿ ಪೂರೈಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಸಚಿವರು ಪರ್ಯಾಯ ಇಂಧನ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದ್ದು. ಮರದ ಇಂಧನ, ವಿದ್ಯುತ್ ಆಧರಿತ ಇಂಡಕ್ಷನ್ ಸ್ಟೌವ್‌ಗಳು, ಬಯೋಗ್ಯಾಸ್ ಮತ್ತು ಸೌರಶಕ್ತಿ ಬಳಸುವಂತೆ ಸಲಹೆ ನೀಡಿದ್ದಾರೆ. ನಾವು ಸುಮಾರು ಶೇ.೭೦ ತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಇಂತಹ ಸಂಕಷ್ಟಗಳು ನಮ್ಮ ಸ್ವಾವಲಂಬನೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ ಎಂದು ಹೇಳಿದರು.

- ಕೋವರ್ ಕೊಲ್ಲಿ ಇಂದ್ರೇಶ್