ಸುಂಟಿಕೊಪ್ಪ, ಮಾ. ೨೩: ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್‌ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಂಟಿಕೊಪ್ಪ ಪಟ್ಟಣವು ಶಾಂತಿ ಸೌಹರ್ಧತೆಯನ್ನು ಹಿಂದಿನಿAದಿಲ್ಲೂ ಕಾಯ್ದುಕೊಂಡು ಬಂದಿದ್ದು, ಈ ಸೌಹರ್ದತೆಯನ್ನು ಮುಂದೆಯೂ ಗಟ್ಟಿಯಾಗಿ ನೆಲೆಯೂರಬೇಕಾದರೇ ವಿವಿಧ ಧರ್ಮಗಳ ಮುಖಂಡರು ಮುಂದಾಳತ್ವ ತೆಗದುಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ಹೇಳಿದರು.
ಹಬ್ಬಗಳನ್ನು ಆಚರಿಸುವ ಸಂದರ್ಭ ಇತರರ ಭಾವನೆಗಳನ್ನು ಗೌರವಿಸುವಂತಿರಬೇಕು. ಅವರ ಭಾವನೆಗಳಿಗೆ ಘಾಸಿ ಉಂಟಾಗದAತೆ ಆಚರಿಸಬೇಕು. ಎಂದು ಅವರು ಹೇಳಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಅಪರಾಧ ವಿಭಾಗ ಠಾಣಾಧಿಕಾರಿ ಗೋಪಾಲ್ ಅವರುಗಳು ಶಾಂತಿ ಸೌಹರ್ಧ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರದ ಮುಖಂಡರುಗಳಾದ ಕೆ.ಇ ಕರೀಂ, ಕೆ.ಎಚ್ ಶರೀಫ್, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಖಜಾಂಚಿ ರಮೇಶ್ ಪಿಳ್ಳೆ, ಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ಹರದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮನಾಭ, ರವಿ, ಅಬ್ದುಲ್ ಸಲಾಂ, ಸೂಫಿ, ಗದ್ದೆಹಳ್ಳ ಜಮಾಯಿತಿನ ಇಬ್ರಾಹಿಂ ಸೇರಿದಂತೆ ಕೊಡಗರಹಳ್ಳಿ, ೭ನೇ ಹೊಸಕೋಟೆ, ಕಂಬಿಬಾಣೆ ಗ್ರಾಮದ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.