ಕಣಿವೆ, ಮಾ.೨೪: ಇತ್ತೀಚಿಗೆ ಕುಶಾಲನಗರ ತಾಲೂಕಿನ ಚಿಕ್ಕನಾಯಕನಹೊಸಳ್ಳಿ ಗ್ರಾಮದಲ್ಲಿ ಭಾರೀ ಮಳೆ-ಗಾಳಿ ಹಾಗೂ ಆಲಿಕಲ್ಲು ಮಳೆಗೆ ಹಾನಿಯಾದ ಮನೆಗಳು ಹಾಗೂ ಬೆಳೆಗಳನ್ನು ಶಾಸಕ ಡಾ.ಮಂತರ್ ಗೌಡ ಪರಿಶೀಲನೆ ನಡೆಸಿದರು.

ಗ್ರಾಮದಲ್ಲಿ ರಭಸದ ಗಾಳಿಗೆ ಮನೆಯ ಶೀಟುಗಳನ್ನು ಕಳೆದುಕೊಂಡ ಸುಂದರ, ಫಾಲ್ಗುಣ, ರವಿ ಹಾಗೂ ಇತರರು ಬೆಳೆ ಹಾನಿ ಹಾಗೂ ಸ್ವತ್ತು ಹಾನಿಗೆ ಸೂಕ್ತ ಪರಿಹಾರವನ್ನು ತ್ವರಿತಗತಿಯಲ್ಲಿ ಕೊಡಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.