ಮಡಿಕೇರಿ, ಮಾ. ೨೭: ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಏಪ್ರಿಲ್ ೧ ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಭೆ ನಡೆಯಲಿದೆ. ನಾಪೋಕ್ಲುವಿನಲ್ಲಿ ಇತ್ತೀಚೆಗೆ ಹಿಂದೂ ಯುವಕನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಅಂದು ಬೆಳಿಗ್ಗೆ ೧೦ ಗಂಟೆಗೆ ನಾಪೋಕ್ಲು ಹಳೇ ತಾಲೂಕು ಜಂಕ್ಷನ್‌ನಿAದ ಜಾಥಾ ಹೊರಡಲಿದೆ. ನಂತರ ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಹಿಂದೂ ವಿರೋಧಿ ಸಮಾಜಘಾತುಕರನ್ನು ಬೆಂಬಲಿಸುತ್ತಿರುವ ಮತಾಂಧರ ವಿರುದ್ಧ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಆರ್ಥಿಕ ಜಿಹಾದ್ ಮತ್ತು ಜನಸಂಖ್ಯಾ ಜಿಹಾದ್ ವಿರುದ್ಧ ಹಾಗೂ ಅಕ್ರಮ ಬಾಂಗ್ಲಾದೇಶ ವಲಸಿಗರ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಮತ್ತು ಅವರ ಗಡಿಪಾರಿಗೆ ಜನಜಾಗೃತಿ ಜಾಥಾ ಹಾಗೂ ಸಭೆಯಲ್ಲಿ ಆಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.