ಚೆಯ್ಯಂಡಾಣೆ, ಮಾ. ೨೭: ಕುಂಜಿಲ ಪೈನರಿ ದರ್ಗಾದಲ್ಲಿ ವಾರ್ಷಿಕ ಉರೂಸ್ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು.

ಶುಕ್ರವಾರ ಜುಮಾ ನಮಾಜಿನ ಬಳಿಕ ದರ್ಗಾಕ್ಕೆ ತೆರಳಿದ ಸಮುದಾಯದವರು ಜಮಾಅತ್ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ, ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎ. ಶೌಕತ್ ಅಲಿ ಧ್ವಜಾರೋಹಣ ನೆರವೇರಿಸಿದರು. ಉರೂಸ್ ಸಮಾರಂಭ ತಾ. ೩೧ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ತಾ. ೩೦ ರಂದು ಮಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಅಂದು ಸಂಜೆ ೪ ಗಂಟೆಗೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.

ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ವಿ.ಎ. ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಸಹೀದ್ ಪಯ್ಯಡತ್, ಕೋಶಾಧಿಕಾರಿ ಕುಂಡAಡ ಹಂಝ, ದರ್ಸ್ ಸಮಿತಿ ಅಧ್ಯಕ್ಷ ತರ್ಮಲ್ ಹಂಝ, ರಿಲೀಫ್ ಉಪಾಧ್ಯಕ್ಷ ರಶೀದ್ ಮಕ್ಕಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಜಮಾಅತ್ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸಲಹಾ ಸಮಿತಿ ಸದಸ್ಯರು, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು, ಜಮಾಅತ್‌ನ ಸದಸ್ಯರು, ಗ್ರಾಮಸ್ಥರು, ಮತ್ತಿತರರು ಪಾಲ್ಗೊಂಡಿದ್ದರು.