ಸುಂಟಿಕೊಪ್ಪ, ಮಾ. ೨೭: ಉಲುಗುಲಿ ಗ್ರಾಮ ಪನ್ಯದ ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ತಾ. ೩೦ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಉಲುಗುಲಿ, ಹರದೂರು, ಆಂಜನಗೇರಿ ಬೆಟ್ಟಗೇರಿ ಗ್ರಾಮಸ್ಥರು ಸೇರಿ ಆಚರಿಸಿಕೊಂಡು ಬರುತ್ತಿರುವ ಬೆಳ್ಳೇರಿಕಮ್ಮ ವಾರ್ಷಿಕ ಉತ್ಸವವು ಬೆಳಿಗ್ಗೆ ೭ ಗಂಟೆಗೆ ಮಂದನ ಮನೆಯಿಂದ ಭಂಡಾರ ಹೊರಡುವುದು, ೮. ಗಂಟೆಗೆ ದೇವರ ಸನ್ನಿಧಿಯನ್ನು ಸೇರುವುದು, ೮.೧೫ ಗಂಟೆಗೆ ಶ್ರೀ ದೇವರ ಬೆಳಕು, ೮.೩೦ಕ್ಕೆ ಶ್ರೀ ದೇವರ ಚೌಲಿಆಟ (ನೃತ್ಯಸೇವೆ) ೯ ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವುದು, ೯.೩೦ ಗಂಟೆಗೆ ವಸಂತ ಕಟ್ಟೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಪೂಜೆ, ೧೦ ಗಂಟೆಗೆ ಉತ್ಸವ ಮೂರ್ತಿಯ ನೃತ್ಯ ಬಲಿ, ದರ್ಶನ ಬಲಿ, ೧೨ ಗಂಟೆಗೆ ಶ್ರೀದೇವರಿಗೆ ಭಂಡಾರ ಹಾಕುವುದು, ಮಧ್ಯಾಹ್ನ ೧ ಗಂಟೆಗೆ ತೀರ್ಥ ಪ್ರಸಾದ ವಿತರಣೆ ಹಾಗೂ ೧.೩೦ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.