ಸೋಮವಾರಪೇಟೆ, ಮಾ. ೩೦: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೇಸಿಗೆ ಹಾಕಿ ತರಬೇತಿ ಶಿಬಿರವನ್ನು ಸ್ಥಳೀಯ ಜೂನಿಯರ್ ಕಾಲೇಜು ಮುಂಭಾಗ ಆಸ್ಟೊçà ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ನೂತನ ಅಧ್ಯಕ್ಷ ಬಿ.ಆರ್. ಮಹೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಉತ್ತಮ ಕ್ರೀಡಾಪಟುಗಳನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗಿದೆ. ಈ ಬಾರಿ ಏ. ೧೦ ರಿಂದ ಮೇ ೧೦ ರವರೆಗೆ ಶಿಬಿರ ನಡೆಯಲಿದೆ ಎಂದರು.
ಭಾರತ ಕಿರಿಯರ ತಂಡ ತರಬೇತುದಾರರಾಗಿರುವ ಸೋಮವಾರಪೇಟೆಯ ಜನಾರ್ದನ್, ಆರ್ಮಿ ತಂಡದ ಕೋಚ್ ದೇವದಾಸ್, ಭಾರತ ಹಾಕಿ ತಂಡದ ಮಾಜಿ ನಾಯಕ ಅರ್ಜುನ್ ಹಾಲಪ್ಪ, ಮಾಜಿ ಉಪ ನಾಯಕ ಎಸ್.ವಿ. ಸುನಿಲ್, ಅಂತರರಾಷ್ಟಿçÃಯ ಹಾಕಿಪಟುಗಳಾದ ವಿಕ್ರಂಕಾAತ್ ಸೇರಿದಂತೆ ಇತರರು ಆಗಮಿಸಿ ಮಕ್ಕಳಿಗೆ ಹಾಕಿ ಕ್ರೀಡೆಯ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಲಬ್‌ನಿಂದ ಆಯೋಜಿಸಿದ ತರಬೇತಿ ಶಿಬಿರದಲ್ಲಿ ಭಾಗಿಯಾದ ಹಲವಷ್ಟು ಮಂದಿ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಹಲವಷ್ಟು ಮಂದಿ ರೈಲ್ವೇ, ಎಂಇಜಿ ಸೇರಿದಂತೆ ಇನ್ನಿತರ ತಂಡಗಳ ಪರವಾಗಿ ಆಟವಾಡುತ್ತಿದ್ದಾರೆ ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಮೊಟ್ಟೆ, ಹಾಲು, ಹಣ್ಣು ವಿತರಿಸಲಾಗುವುದು. ಬೆಳಿಗ್ಗೆ ೬.೧೫ರಿಂದ ೮.೧೫ರವರೆಗೆ ಶಿಬಿರ ನಡೆಯಲಿದ್ದು, ೬ ರಿಂದ ೨೧ ವರ್ಷ ವಯೋಮಾನದವರು ಭಾಗವಹಿಸಬಹುದು ಎಂದ ಮಹೇಶ್, ಹೆಚ್ಚಿನ ಮಾಹಿತಿಗೆ ಮೊ.೯೫೩೫೩೯೩೦೫೦, ೯೯೧೬೫೫೭೫೫೮ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಹೆಚ್.ಎನ್. ಅಶೋಕ್, ಗೌರವಾಧ್ಯಕ್ಷ ಎಂ.ಈ. ಮಹೇಶ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಉಪಾಧ್ಯಕ್ಷ ಬಿ.ಜೆ. ಮಂಜುನಾಥ್, ಸಹ ಕಾರ್ಯದರ್ಶಿ ಬಿ.ಎನ್. ರಂಜನ್, ಖಜಾಂಚಿ ವಿನಾಯಕ ಇದ್ದರು.