ಪೊನ್ನಂಪೇಟೆ, ಮಾ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆಯ ಹಿರಿಯ ಛಾಯಾಗ್ರಾಹಕ ಎಸ್. ಎಲ್. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಕಳೆದ ೫೭ ವರ್ಷಗಳಿಂದ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ, ಶಿವಣ್ಣ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜು ಸ್ಥಾಪನೆಯಾದ ವರ್ಷದಿಂದ ಇದುವರೆಗೂ ಕಾವೇರಿ ಕಾಲೇಜಿನ ಸಭೆ ಸಮಾರಂಭಗಳ ಫೋಟೋ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪAಡ ಸುಗುಣ ಮುತ್ತಣ್ಣ, ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಮುಖ್ಯ ಅತಿಥಿ ಪುಗ್ಗೇರ ದಿನೇಶ್ ದೇವಯ್ಯ ಸನ್ಮಾನಿಸಿದರು.