ಮಡಿಕೇರಿ, ಮಾ. ೩೦: ಕಿರುನಾಲ್ಕುನಾಡು ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ತಾ. ೩೧ ರಿಂದ (ಇಂದಿನಿAದ) ಏಪ್ರಿಲ್ ೪ ರವರೆಗೆ ಜರುಗಲಿದೆ. ತಾ. ೩೧ ರಂದು ಸಂಜೆ ೭ ಗಂಟೆಗೆ ಕೊಡಿಮರ ಪೂಜೆ ನಡೆಯಲಿದೆ.

ಪ್ರತಿ ದಿನ ಇರುಬೆಳಕು ಪೂಜೆ, ಏಪ್ರಿಲ್ ೩ ರಂದು ವಸಂತ ಪೂಜೆ, ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಪೂಜೆಗಳಿದ್ದು, ಏಪ್ರಿಲ್ ೪ ರಂದು ಬೆಳಿಗ್ಗೆ ೮ ಯಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವಿಶೇಷ ಪೂಜೆಗಳು, ಅನ್ನ ಸಂತರ್ಪಣೆ, ನಂತರ ಮಧ್ಯಾಹ್ನ ೩.೩೦ ಗಂಟೆಗೆ ದೇವರು ಹೊರಬರುವುದು ಹಾಗೂ ಭಂಡಾರ ಹಾಕುವುದು ನಂತರ ಪೊನ್ನಂಪೇಟೆ ನಗರದಲ್ಲಿ ಮೆರವಣಿಗೆ ನಡೆಸಿ, ಅಲ್ಲಿನ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಗುವುದು ನಂತರ, ದೇವರ ಜಳಕ ನಡೆದು ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಂತರ ಮಹಾಪೂಜೆ ಹಾಗೂ ಅನ್ನಸಂತರ್ಪಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.