ಕೂಡಿಗೆ, ಮಾ. ೩೦: ಮಾಲಂಬಿ ಬ್ರದರ್ಸ್ ಇವರ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೂಡುಮಂಗಳೂರು ಬಿ.ವೈಸಿ. ತಂಡವು ಪ್ರಥಮ ಸ್ಥಾನವನ್ನು ಪಡೆದು ಟ್ರೋಫಿ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಸ್ಥಾನವನ್ನು ಟೀಮ್ ಲಾಲಿ ಹೆಬ್ಬಾಲೆ ತಂಡ, ತೃತೀಯ ಶನಿವಾರಸಂತೆ ತಂಡ, ಚತುರ್ಥ ಸ್ಥಾನವನ್ನು ಮಾಲಂಬಿ ಬ್ರದರ್ಸ್ ತಂಡವು ಪಡೆದುಕೊಂಡಿತು. ವಿಜೇತ ತಂಡಗಳು ಆಕರ್ಷಕ ಟ್ರೋಫಿ, ಹಾಗೂ ನಗದು ಬಹುಮಾನ ಪಡೆದುಕೊಂಡವು.
ಮಾಲAಬಿ ಬ್ರದರ್ಸ್ ಸಂಘದ ಅಧ್ಯಕ್ಷ ಚೇತನ್ ಹಾಗೂ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಬಹುಮಾನ ವಿತರಣೆ ನೆರವೇರಿಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಫೈನಲ್ ಪಂದ್ಯಾಟದಲ್ಲಿ ಶುಭ ಕೋರಿ ಚಾಲನೆ ನೀಡಿದರು.
ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿವಿಧ. ಸಂಘಟನೆಯ ಪ್ರಮುಖರು, ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.