ಮಡಿಕೇರಿ, ಮಾ. ೩೦ : ನಗÀರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಅಮೇರಿಕಾದಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿರುವ ಮಡಿಕೇರಿ ಮೂಲದ ಡಾ. ಮೂಡೆರ ಜಗದೀಶ್ ಸುಬ್ಬಯ್ಯ ಭೇಟಿ ನೀಡಿದರು.
ಭಾರತೀಯ ಮೂಲದ ಅಮೇರಿಕನ್ ಭೌತಶಾಸ್ತçಜ್ಞರು ಮತ್ತು ವಿಶ್ವದ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಎಂ.ಐ.ಟಿ.ಯ ಫ್ರಾನ್ಸಿಸ್ ಬಿಟರ್ ಮ್ಯಾಗ್ನೆಟ್ ಪ್ರಯೋಗಾಲಯದಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿ ಮತ್ತು ನ್ಯಾನೋ ತಂತ್ರಜ್ಞಾನ ಮತ್ತು ಕಾಂತಿಯತೆಯ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳನ್ನು ಜಗದೀಶ್ ಅವರು ಮಾಡಿದ್ದಾರೆ.
೨ ಗಂಟೆಗಳ ಕಾಲ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಪರಿಮಿತ ಜ್ಞಾನಕ್ಕೆ ಯಾವುದೇ ಮಿತಿ ಇಲ್ಲ ಅದು ಎಲ್ಲರಿಗೂ ಸೇರಿದ್ದು ಜ್ಞಾನೋದಯ ನೀಡುವ ವಿಕಿರಣ ಅಜ್ಞಾನವನ್ನು ಹೋಗಲಾಡಿಸುತ್ತದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಬಾಳೆಯಡ ಸವಿತಾ ಪೂವಯ್ಯ ಸೇರಿದಂತೆ ಅಧ್ಯಾಪಕ ವೃಂದದವರು ಹಾಜರಿದ್ದರು.