ಐಗೂರು, ಮಾ. ೩೦: ಟಾಟಾ ಕಾಫಿ ಕಿಬ್ರಿಬೆಟ್ಟ ಡಿವಿಜನ್ ವತಿಯಿಂದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಆಂದೋಲನ ಮಾಡಲಾಯಿತು.

ಹೆದ್ದಾರಿ ರಸ್ತೆಯ ಐಗೂರಿನ ಜಂಕ್ಷನ್‌ನಿAದ ಕಿರುಗಂದೂರಿನ ರಸ್ತೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಖಾಲಿ ಬೀರು ಮತ್ತು ಮದ್ಯದ ಸೀಸೆಗಳು, ಪ್ಲಾಸ್ಟಿಕ್ ಗ್ಲಾಸ್ ಮತ್ತು ಬಾಟಲ್‌ಗಳು, ಪಾದರಕ್ಷೆಗಳು, ಹಳೆಯ ಚಿಂದಿ ಬಟ್ಟೆಗಳು ತುಂಬಿದ್ದು ಬರೋಬ್ಬರಿ ಸುಮಾರು ೨೦ ಚೀಲಗಳಷ್ಟು ಕಸ ಮತ್ತು ತ್ಯಾಜ್ಯವನ್ನು ಸಂಸ್ಥೆಯ ಕಾರ್ಮಿಕರು ಶೇಖರಿಸಿದರು. ಹಲವು ವರ್ಷಗಳಿಂದ ಐಗೂರು ವ್ಯಾಪ್ತಿಯ ಸರ್ಕಾರಿ ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿ ಮೋದೀಜಿ ಅವರು ತಂದ ಸ್ವಚ್ಛ ಭಾರತದ ಆಂದೋಲನಕ್ಕೆ ಟಾಟಾ ಕಾಫಿ ಸಂಸ್ಥೆಯವರು ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಸಾರ್ವಜನಿಕರು ರಸ್ತೆ ಬದಿಯಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಕುವುದರಲ್ಲಿ ನಿರತರಾಗಿದ್ದು, ಆಂದೋಲನಕ್ಕೆ ಕೈಜೋಡಿಸುವುದು ಕಂಡುಬರುತ್ತಿಲ್ಲ.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಸೀನಿಯರ್ ಮ್ಯಾನೇಜರ್ ರಾಕೇಶ್ ಕರುಂಬಯ್ಯ, ಅಸಿಸ್ಟೆಂಟ್ ಮ್ಯಾನೇಜರ್ ಆಶಿಶ್ ಪಾತೆಲ್, ಫೀಲ್ಡ್ ಆಫೀಸರ್ ಸಚಿನ್, ಅಸಿಸ್ಟೆಂಟ್ ಫೀಲ್ಡ್ ಆಫೀಸರ್ ಸಂಜಯ್, ಆರೋಗ್ಯ ಕಾರ್ಯಕರ್ತೆ ಸರಸ್ವತಿ ಮತ್ತು ಕಾರ್ಮಿಕರು ಭಾಗವಹಿಸಿದ್ದರು.