ಮಡಿಕೇರಿ, ಮಾ. ೩೧: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ೧೪ ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ದೇವರ ಜಾತ್ರೆ ಏಪ್ರಿಲ್ ೧ ರಿಂದ (ಇಂದಿನಿAದ) ಏಪ್ರಿಲ್ ೪ ರವರೆಗೆ ಜರುಗಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಅವರು, ನಾಲ್ಕು ದಿನಗಳ ಕಾಲ ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟಿ ಮಡೆಯಚ್ಚನ್ ಶ್ರೀ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ಇವರುಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ವಿಜೃಂಭಣೆಯಿAದ ನಡೆಯಲಿದೆ.

ಏಪ್ರಿಲ್ ೧ ರಂದು ಸಂಜೆ ೬.೩೦ ರಿಂದ ಆಚಾರ್ಯವರ್ಣ, ಪ್ರಾರ್ಥನೆ, ಕಲಶ ಪೂಜೆ, ಭಗವತಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಏಪ್ರಿಲ್ ೨ ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ೯ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ೧೦ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ೧೧ಕ್ಕೆ ಶ್ರೀ ನಾಗದೇವರಿಗೆ ತಂಬಿಲ ಸಮರ್ಪಣೆ, ೧೧.೩೦ಕ್ಕೆ ಕಲಶಾಭಿಷೇಕ, ೧೨ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರುಗಲಿದೆ.

ಸಂಜೆ ೪ಕ್ಕೆ ಧ್ವಜಾರೋಹಣ, ೪.೩೦ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ೫.೩೦ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ೬.೩೦ಕ್ಕೆ ಶ್ರೀ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ, ೭.೩೦ಕ್ಕೆ ಹರಕೆ ಕೋಲಗಳು ನಡೆಯಲಿವೆ. ಏಪ್ರಿಲ್ ೩ ರ ಸಂಜೆ ೪ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ೪.೩೦ಕ್ಕೆ ಶ್ರೀ ಶಾಸ್ತಪ್ಪ ದೇವರ ವೇಳ್ಳಾಟಂ, ೫.೩೦ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೭ಕ್ಕೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ರಾ. ೮.೪೦ ರಿಂದ ೧೦.೩೦ ರವರೆಗೆ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ ೭.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ೯.೩೦ ಶ್ರೀ ಪೋದಿ ವೆಳ್ಳಾಟಂ, ೧೦.೩೦ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ೧೨ ಗಂಟೆಗೆ ಶ್ರೀ ಶಿವಭೂತ ತೆರೆ, ರಾತ್ರಿ ೧ಕ್ಕೆ ಶ್ರೀ ಗುಳಿಗೆ ದೇವರ ತೆರೆ, ೨ ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, ೨.೩೦ಕ್ಕೆ ಶ್ರೀ ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ.

ಏಪ್ರಿಲ್ ೪ ರಂದು ಬೆಳಿಗ್ಗೆ ೪ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ೫ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, ೮ ಗಂಟೆಗೆ ಶ್ರೀ ಪೋದಿ ತೆರೆ, ೯.೩೦ಕ್ಕೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ೧೧.೩೦ಕ್ಕೆ ಧ್ವಜ ಅವರೋಹಣ ನೆರವೇರಲಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಮುತ್ತಪ್ಪ ಕ್ಷೇತ್ರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಜೀರ್ಣೋದ್ಧಾರ ರೂ. ೫೦ ಲಕ್ಷ ವೆಚ್ಚದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಸದಸ್ಯರಾದ ಕೆ.ಎಸ್. ರಮೇಶ್, ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೈ, ಮಹಿಳಾ ವೇದಿಕೆಯ ಪ್ರಮುಖರಾದ ಕಾಳಚಂಡ ರಾಣಿ ಗಣಪತಿ, ದೇವಾಲಯ ಸಮಿತಿ ಖಜಾಂಚಿ ಉಣ್ಣಿಕೃಷ್ಣ, ಹಿರಿಯ ಸದಸ್ಯ ವಾಸುದೇವ್ ಹಾಜರಿದ್ದರು.