ಶ್ರೀಮಂಗಲ, ಮಾ. ೩೧: ಕೊಡವ ಟಗ್ ಆಫ್ ವಾರ್ ಅಕಾಡೆಮಿ ಹಾಗೂ ಪ್ರಸಕ್ತ ವರ್ಷದ ಕೊಡವ ಒಕ್ಕಡೊಕ್ಕಡ ಕೇರ್‌ಬಲಿ ನಮ್ಮೆಯ ಆಯೋಜಕರಾದ ಚೀಯಕಪೂವಂಡ ಕುಟುಂಬದ ನಮ್ಮೆ ಸಮಿತಿಯ ಸದಸ್ಯರ ಜಂಟಿ ಸಭೆ ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪದಲ್ಲಿ ನಡೆಯಿತು. ೫ನೆ ವರ್ಷದ ಕೊಡವ ಒಕ್ಕಡೊಕ್ಕಡ ಚೀಯಕಪೂವಂಡ ಕೇರ್ ಬಲಿ ನಮ್ಮೆ ಏಪ್ರಿಲ್ ೨೩ ರಿಂದ ೨೬ ರವರೆಗೆ ನಾಪೋಕ್ಲು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಇದರ ಯಶಸ್ಸಿಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮೈದಾನದ ಸಿದ್ಧತೆ, ಗ್ಯಾಲರಿ ವ್ಯವಸ್ಥೆ, ವೇದಿಕೆಯ ನಿರ್ಮಾಣ, ತಾಂತ್ರಿಕ ವ್ಯವಸ್ಥೆ, ತಾಂತ್ರಿಕ ಹಾಗೂ ಇತರ ಸಮಿತಿಗಳ ಜವಾಬ್ದಾರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಪುರುಷರ, ಮಹಿಳೆಯರ ಹಾಗೂ ೧೬ ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಬಹುಮಾನ ಅಲ್ಲದೆ ಈ ಬಾರಿ ೫ನೆ ಹಾಗೂ ೬ನೆ ಬಹುಮಾನವನ್ನೂ ನೀಡಲಾಗುತ್ತಿದ್ದು ೩೦೦ಕ್ಕೂ ಹೆಚ್ಚು ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದ್ದು, ಚೀಯಕಪೂವಂಡ ಕೇರ್‌ಬಲಿ ನಮ್ಮೆಯನ್ನು ಯಶಸ್ವಿಗೊಳಿಸಲು ಸಮಿತಿಯ ಸರ್ವ ಸದಸ್ಯರು ಉತ್ಸುರಾಗಿರುವ ಭಾವನೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಈ ಸಂದರ್ಭ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಉಳುವಂಗಡ ಲೋಹಿತ್ ಭೀಮಯ್ಯ, ಖಜಾಂಚಿ ಜಮ್ಮಡ ಗಿಲ್, ನಿರ್ದೇಶಕರಾದ ಕೊಣಿಯಂಡ ಮಂಜು ಮಾದಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು, ಕೇರ್ ಬಲಿ ನಮ್ಮೆ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಉಪಾಧ್ಯಕ್ಷ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ನಾಚಪ್ಪ, ಜಂಟಿ ಕಾರ್ಯದರ್ಶಿ ಸಚಿನ್ ಮುತ್ತಪ್ಪ, ಕೇರ್ ಬಲಿ ನಮ್ಮೆ ಆಯೋಜನ ನಿರ್ದೇಶಕ ನವೀನ್ ನಾಚಪ್ಪ, ಸಮಿತಿ ನಿರ್ದೇಶಕರಾದ ಸಚಿನ್ ಪೂವಯ್ಯ, ಸುನಿಲ್ ಮಾಚಯ್ಯ, ಪ್ರಕಾಶ್ ಮಂದಣ್ಣ, ಸತೀಶ್ ದೇವಯ್ಯ, ಸುಜಿತ್ ಸಿ.ಡಿ., ಅಯ್ಯಪ್ಪ. ಸಿ.ಯು. ಹಾಜರಿದ್ದರು.