ಕೂಡಿಗೆ, ಮಾ. ೩೧: ಸೋಮವಾರಪೇಟೆ ತಾಲೂಕು ವಲಯ ಅರಣ್ಯ ಇಲಾಖೆ, ಬಾಣವಾರ ಉಪ ವಲಯ ಅರಣ್ಯ ಇಲಾಖೆ ಇವರ ವತಿಯಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಿಸುವ ಬಗ್ಗೆ ಮತ್ತು ಕಾಡ್ಗಿಚ್ಚು ತಡೆಗಟ್ಟುವ ಬಗ್ಗೆ ಜಾಗೃತಿಯ ವಿಷಯದ ಬಗ್ಗೆ ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ಸಮಾಲೋಚನೆ ಸಭೆಯು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಲಯ ವ್ಯಾಪ್ತಿಯ ಅಡಿನಾಡೂರು ಗ್ರಾಮದಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಮಾನವ ಅರಣ್ಯ ಪ್ರದೇಶದ ಪ್ರಾಣಿಗಳಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ, ಪರಿಸರ ಸಂರಕ್ಷಣೆಯಲ್ಲಿ ವನ್ಯಜೀವಿಗಳ ಪ್ರಾಮುಖ್ಯತೆ, ಸೇರಿದಂತೆ ವಿವಿಧ ಹಂತದ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶರಣ ಕುಮಾರ್, ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ಶ್ಯಾಮಲಾ, ಗ್ರಾಮದ ಪ್ರಮುಖರಾದ ಲಿಂಗಪ್ಪ, ಸಂಯೋಜಕರಾದ ಸುನಂದ ಕುಮಾರ್, ಗೋವಿಂದರಾಜ್, ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು. ಹಾಜರಿದ್ದರು.