ಮಡಿಕೇರಿ, ಮಾ. ೩೧ : ಮಕ್ಕಂದೂರು-ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ಪ್ರಥಮ ವರ್ಷದ ಮಹಿಳಾ ದಿನಾಚರಣೆ ಸಂಭ್ರಮದಿAದ ನಡೆಯಿತು. ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಡನಕೊಲ್ಲಿ ಶಿಕ್ಷಕಿ ಮಳ್ಳನ ಮಂಜುಳಾ ಮಾತನಾಡಿ; ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಮಹಿಳೆ ತಾನು ಸಬಲಳು ಎಂದು ತೋರಿಸಿಕೊಟ್ಟಿದ್ದಾಳೆ. ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತÀ ಗಮನ ಹರಿಸಬೇಕಾಗಿದೆ. ಸಮಾಜ ಹಾಗೂ ಸಂಘಟನೆಗಳ ಮೂಲಕ ಮಹಿಳೆಯರೂ ಸಂಘಟಿತರಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವದರೊಂದಿಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಹೋಗುವಂತೆ ಸಲಹೆ ಮಾಡಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೇರ ನವೀನ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳೆಯರಿಗೆ ವಿವಿಧ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದ ವಿವಿಧ ಬಗೆಯ ತಿನಿಸುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಕುಂಬಗೌಡನ ಕವಿತ, ಸಂಘಟನಾ ಕಾರ್ಯದರ್ಶಿ ಕುಡೆಕಲ್ ಸವಿತ ಸಂತೋಷ್ ಇದ್ದರು. ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್, ಕಾರ್ಯದರ್ಶಿ ಚೀಯಂಡಿ ಸುಜಯ್ ಪಾಲ್ಗೊಂಡಿದ್ದರು. ಒಕ್ಕೂಟದ ಕಾರ್ಯದರ್ಶಿ ತೇಲಬೈಲು ಆಶಿಕಾ ದಿನೇಶ್ ಸ್ವಾಗತಿಸಿ, ನಿರೂಪಿಸಿದರೆ, ಕುಂಬಗೌಡನ ಕವಿತ ಹಾಗೂ ಖಜಾಂಚಿ ಕೊಟ್ಟಕೇರಿಯನ ಕಲ್ಪನ ಪ್ರದೀಪ್ ಪ್ರಾರ್ಥಿಸಿದರು. ಚಲನ ಹೀರೇಗೌಡನ ವಂದಿಸಿದರು.