ಚೆಯ್ಯಂಡಾಣೆ, ಮಾ. ೩೧: ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊAದರಲ್ಲಿ ದೈವಕ್ಕೆ ಅವಮಾನ ಮಾಡಿದ ವಿಚಾರಕ್ಕೆ ಸಂಬAಧಿಸಿದAತೆ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಎಮ್ಮೆಮಾಡು ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಜಮಾಅತ್ ನಿಯಮಗಳಿಗೆ ಅನುಗುಣವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದೆ. ಎಮ್ಮೆಮಾಡು ಜಮಾಅತ್ ಕಚೇರಿಯಲ್ಲಿ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಅಲ್ ಐದರೂಸಿ, ಘಟನೆಗೆ ಸಂಬAಧಿಸಿದAತೆ ಜಮಾಅತ್ ತುರ್ತುಸಭೆ ನಡೆಸಿ, ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಜಮಾಅತ್‌ಗೆ ಕರೆಸಿ, ವಿಚಾರಣೆ ನಡೆಸಿದ ಸಂದರ್ಭ ಮದುವೆ ಸಮಾರಂಭ ಮುಗಿದ ಬಳಿಕ ಸ್ನೇಹಿತರೆಲ್ಲರೂ ಒಗ್ಗೂಡಿದಾಗ ತಮಾಷೆಗಾಗಿ ಹೀಗೆ ವರ್ತಿಸಿದ್ದು ಯಾವುದೇ ಜಾತಿ, ಧರ್ಮವನ್ನು ನಿಂದನೆ ಮಾಡುವ ಉದ್ದೇಶವಿರಲಿಲ್ಲ ಎಂದು ತಿಳಿಸಿ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. ಮುಂದೆ ಇಂತಹ ಘಟನೆ ಮರುಕಳಿಸಿದಲ್ಲಿ ಜಮಾಅತ್‌ನ ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ, ಸಹ ಕಾರ್ಯದರ್ಶಿ ಹನೀಫಾ ಉಪಸ್ಥಿತರಿದ್ದರು.