ನಾಪೋಕ್ಲು, ಮಾ. ೩೧: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ನಾಲ್ನಾಡ್ ಅಂತರ ಗ್ರಾಮ ಹಾಕಿ ಕಪ್ ಟೂರ್ನಿಯಲ್ಲಿ ನಾಪೋಕ್ಲು ಎ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿವೆ.
ಮಂಗಳವಾರ ಮೊದಲ ಸೆಮಿಫೈನಲ್ನಲ್ಲಿ ನಾಪೋಕ್ಲು ಎ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದು ನಾಪೋಕ್ಲು ಎ ತಂಡ ೪ -೧ ಅಂತರದಿAದ ಜಯ ಸಾಧಿಸಿತು. ನಾಪೋಕ್ಲು ಎ ತಂಡದ ಪರವಾಗಿ ಆಟಗಾರರಾದ ನಾಚಪ್ಪ ಮತ್ತು ಪುನೀತ್ ತಲಾ ಎರಡು ಗೋಲು ಗಳಿಸಿದರು. ಯವಕಪಾಡಿ ತಂಡದ ಆಟಗಾರ ಜೋಯಪ್ಪ ಒಂದು ಗೋಲು ಗಳಿಸಿದರು. ಎರಡನೇ ಸೆಮಿಫೈನಲ್ ಪಂದ್ಯ ನಾಪೋಕ್ಲು ಬ್ಲೂ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳ ನಡುವೆ ನಡೆಯಿತು ಬಲ್ಲಮಾವಟಿ ಯೆಲ್ಲೋ ತಂಡ ೬- ೦ ಅಂತರದಿAದ ಜಯ ಸಾಧಿಸಿತು.ಬಲ್ಲಮಾವಟಿ ತಂಡದ ಪರವಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಮೂರು, ಬೊಟ್ಟೋಳಂಡ ಅಯ್ಯಪ್ಪ ಎರಡು ಹಾಗೂ ದರ್ಶನ್ ಒಂದು ಗೋಲು ಗಳಿಸಿದರು. ನಾಪೋಕ್ಲು ಬ್ಲೂ ತಂಡ ಯಾವುದೇ ಗೋಲುಗಳಿಸಲಿಲ್ಲ.
ತಾ. ೨ರಂದು ಗುರುವಾರ ಬೆಳಿಗ್ಗೆ ೧೧ಗಂಟೆಗೆ ನಾಪೋಕ್ಲು ಎ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಮಹಿಳೆಯರಿಗಾಗಿನ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು ತಂಡಗಳ ನಡುವೆ ಪ್ರಶಸ್ತಿಗಾಗಿ ಬೆ. ೧೦ ಗಂಟೆಗೆ ಪೈಪೋಟಿ ನಡೆಯಲಿದೆ. ಕಾಫಿ ಬೆಳೆಗಾರರಾದ ನುಚ್ಚಿಮಣಿಯಂಡ ಜಾಲಿ ಅರೆಯಡ ಗಣೇಶ್, ಕಾಟುಮಣಿಯಂಡ ಉಮೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು
ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಟೂರ್ನಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕ್ಲಬ್ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಚಿ ಚೀಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ಹೊಸೊಕ್ಲು ಮಾಚಯ್ಯ ಹಾಗೂ ನಿರ್ದೇಶಕರು ಮತ್ತಿತ್ತರಿದ್ದರು. ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.
- ದುಗ್ಗಳ ಸದಾನಂದ