ಕೂಡಿಗೆ, ಮಾ. ೩೧: ಕುಶಾಲನಗರದ ರಥ ಬೀದಿಯ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ಶ್ರೀ ರಾಮನವಮಿ ಮತ್ತು ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್ ಮಾತನಾಡಿದರು. ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ಡಿ. ವಿಜಯೇಂದ್ರ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು, ಕಾರ್ಯದರ್ಶಿ ಕೃಷ್ಣ ಕುಮಾರ್, ಖಜಾಂಚಿ ಡಿ. ಜಿ. ಪ್ರದೀಪ್, ಪ್ರಮುಖರಾದ ಡಿ. ಎಸ್. ಮಹೇಶ್, ಚಂದ್ರು, ಆನಂದ್, ಪುನೀತ್, ಕಿರಣ್ ಕುಮಾರ್, ನಿರಂಜನ್, ಗೋಪಾಲ, ಮಹಿಳಾ ಸಮಿತಿಯ ಅಧ್ಯಕ್ಷೆ ಪದ್ಮ ಮಹೇಶ, ಕಾರ್ಯದರ್ಶಿ ದಿವ್ಯ ಅನಿಲ್, ಖಜಾಂಚಿ ರೂಪ ಕುಮಾರ್, ಗೀತಾ ಸೋಮಶೇಖರ, ಶೋಭಾ ಸೋಮಶೆಟ್ಟಿ, ಹಾಗೂ ಯುವಕ ಸಂಘದ ಗಣೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು. ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.