ಸೋಮವಾರಪೇಟೆ, ಮಾ. ೩೧: ಇಲ್ಲಿನ ದೇವಾಂಗ ಸಂಘದ ವತಿಯಿಂದ ದೇವರ ದಾಸಿಮಯ್ಯ ಜಯಂತಿಯನ್ನು ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಪದ್ಮಮ್ಮ ಉದ್ಘಾಟಿಸಿದರು. ನಂತರ ಮಾತನಾಡಿ, ದೇವರ ದಾಸಿಮಯ್ಯ ಕನ್ನಡದ ವಚನ ಸಾಹಿತ್ಯದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ೧೨ನೇ ಶತಮಾನದಲ್ಲಿ ಬದುಕಿದ ಮಹಾನ್ ಸಂತ-ಕವಿ. ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆ, ಜಾತಿ-ಮತ, ಭೇದ, ಅಂಧಶ್ರದ್ಧೆಗಳನ್ನು ತೀವ್ರವಾಗಿ ವಿರೋಧಿಸಿ, ಸಮಾನತೆ ಮತ್ತು ಭಕ್ತಿಯ ಸಂದೇಶವನ್ನು ತಮ್ಮ ವಚನಗಳ ಮೂಲಕ ಹರಡಿದರು ಎಂದರು. ಸಮಾಜದಲ್ಲಿ ಶ್ರಮಕ್ಕೆ ಗೌರವ ಇರಬೇಕು, ಯಾರನ್ನೂ ಹೀನವಾಗಿ ಕಾಣಬಾರದು ಎಂಬ ಚಿಂತನೆ ಅವರದ್ದಾಗಿತ್ತು ಎಂದು ನೆನಪಿಸಿದರು.
ದಾಸಿಮಯ್ಯರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಮೂಲ್ಯವಾಗಿದೆ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ನಮ್ಮ ಜೀವನದಲ್ಲಿ ಸತ್ಯ, ನೀತಿ ಮತ್ತು ಸಮಾನತೆಯನ್ನು ಅನುಸರಿಸಲು ಪ್ರೇರಣೆ ನೀಡುತ್ತವೆ. ಅವರ ಜೀವನ ಮತ್ತು ಸಂದೇಶಗಳು ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ವಹಿಸಿದ್ದರು. ಈ ಸಂದರ್ಭ ಪ್ರಮುಖರಾದ ಜೀತು, ರೇಖಾ ರವಿ, ಜಯಲಕ್ಷಿö್ಮÃ ಸುಬ್ರಮಣಿ, ವಿಜಯಕುಮಾರ್, ಸತೀಶ್, ವಿಜಯ ಹಾಗೂ ಪಾರ್ವತಿ ಇದ್ದರು.