*ಗೋಣಿಕೊಪ್ಪ, ಏ. ೧: ಬಲ್ಯಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದೇಯಂಡ ಜಯಂತಿ, ಸದಸ್ಯರಾಗಿದ್ದ ಕೊಟ್ಟಂಗಡ ಅಯ್ಯಪ್ಪ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಅವರನ್ನು ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರವಾಗಿ ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಿಗೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಶೀಲಾ, ಗ್ರಾಮಸ್ಥೆ ಕೊಟ್ಟಂಗಡ ನಾಣಯ್ಯ, ದೇಯಂಡ ಜನನಿ, ಮಾಚಿಮಾಡ ವಾಣಿ, ರಾಮಣ್ಣ, ಆಶಾ ಕಾರ್ಯಕರ್ತೆ ಕಾಂಚನ, ಅಂಗನವಾಡಿ ಕಾರ್ಯಕರ್ತೆ ಪದ್ಮ, ಸಹಾಯಕಿ ಸೌಮ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೂಚಮಕೇರಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಎನ್ ಸುಬ್ರಮಣಿ, ಮುಖ್ಯ ಶಿಕ್ಷಕ ಕೆ.ಪಿ ಪವಿತ್ರ, ಸಹಶಿಕ್ಷಕ ತಿರುನೆಲ್ಲಿಡ ಜೀವನ್, ಹಸೀನ, ಸುನೋಜಮ್ಮ ಹಾಜರಿದ್ದರು.