ಕೂಡಿಗೆ, ಏ. ೧: ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ ೭ನೇ ವಾರ್ಷಿಕ ಪೂಜೋತ್ಸವವು ತಾ. ೨ ರಂದು (ಇಂದು) ನಡೆಯಲಿದೆ. ಪೂಜೋತ್ಸವ ಅಂಗವಾಗಿ ಕಣಿವೆ ಕಾವೇರಿನದಿಯಲ್ಲಿ ಗಂಗಾ ಪೂಜೆ ನಂತರ ೧೦೮ ಕಳಸದೊಂದಿಗೆ ಶ್ರೀ ವೀರಾಂಜನೇಯ ಸ್ವಾಮಿಯ ಮೆರವಣಿಗೆ ಮೂಲಕ ಪಂಚಾಮೃತ, ರುದ್ರಾಭಿಷೇಕ ಸೇರಿದಂತೆ ವಿವಿಧ ಹೋಮ ಹವನಗಳು ಹಾಗೂ ಮಧ್ಯಾಹ್ನ ಅನ್ನಸಂರ್ತಪಣೆ ನಡೆಯಲಿದೆ.