ಐಗೂರು, ಮಾ. ೩೧: ಸೋಮವಾರಪೇಟೆ ತಾಲೂಕು ಗರಗಂ ದೂರು ಬಿ ಗ್ರಾಮದ ಫ್ರೆಂಡ್ಸ್ ಯೂತ್ ಕ್ಲಬ್ ಹೊಸತೋಟ ವತಿಯಿಂದ ದ್ವಿತೀಯ ವರ್ಷದ ಜಿಲ್ಲಾಮಟ್ಟದ ಗ್ರಾಮಾಂತರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾಟವು ತಾ. ೧೮ ರಂದು ಮಧ್ಯಾಹ್ನ ೧ ಗಂಟೆಗೆ ಹೊಸತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ರೂ.೨೦,೦೦೦ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೧೦,೦೦೦ ಮತ್ತು ಆಕರ್ಷಕ ಟ್ರೋಫಿ ಹಾಗೂ ತೃತೀಯ ಬಹುಮಾನ ರೂ.೫,೦೦೦ ಮತ್ತು ಆಕರ್ಷಕ ಟ್ರೋಫಿ, ಚತುರ್ಥ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುವುದು. ಭಾಗವಹಿಸುವ ತಂಡಗಳು ಎರಡು ದಿನ ಮುಂಚಿತವಾಗಿ ತಂಡದ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ರಾಜೇಶ್ - ೮೭೯೨೦೪೫೦೦೨, ಇಸ್ಮಾಯಿಲ್ - ೯೪೮೩೩೩೩೧೫೪ ಅವರುಗಳನ್ನು ಸಂಪರ್ಕಿಸಬಹುದು.