ಮಡಿಕೇರಿ, ಏ. ೧: ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿ ಚಲಿಸುತ್ತಿದ್ದ ಟಿಟಿ ವ್ಯಾನ್, ಸ್ಕೂಟಿ ಮೇಲೆ ಕಾಡುಕೋಣ ದಾಳಿ ನಡೆಸಿದೆ. ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ನಝೀಮ ಎಂಬ ಮಹಿಳೆಗೆ ತೀವ್ರ ಗಾಯವಾಗಿದೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆ ಏಕಾಏಕಿ ತೋಟದಿಂದ ನುಗ್ಗಿಬಂದ ಕಾಡುಕೋಣ ದಾಳಿ ನಡೆಸಿದ್ದು, ಕೇರಳ ಮೂಲದ ಟಿಟಿ ವಾಹನ ಜಖಂಗೊAಡಿದೆ. ಸ್ಕೂಟಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆಯ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. - ಇಸ್ಮಾಯಿಲ್ ಕಂಡಕರೆ