ನಾಪೋಕ್ಲು, ಏ. ೧: ಸಮೀಪದ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮಡಿಕೇರಿಯಲ್ಲಿರುವ ತನಲ್ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿ ಹಿರಿಯರೊಂದಿಗೆ ಕೆಲ ಕಾಲ ಬೆರೆತರು.

ಆಶ್ರಮ ವಾಸಿಗಳಿಗೆ ಬೇಕಾದ ತಿಂಡಿ-ತಿನಿಸು, ರೇಷನ್‌ಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಖರೀದಿಸಿ ಆಶ್ರಮಕ್ಕೆ ನೀಡಿದರು. ಆಶ್ರಮ ವಾಸಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡ ಶಾಲೆಯ ವತಿಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಹಿರಿಯರನ್ನು ಮನರಂಜಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರು ಮಾತನಾಡಿ, ನಾವು ಅನಾವಶ್ಯಕವಾಗಿ ಪೋಲು ಮಾಡುವ ಹಣವನ್ನು ಹಿರಿಯ ಜೀವಿಗಳ ಆರೈಕೆಗೆ ಮೀಸಲಿಟ್ಟರೆ ಅನೇಕ ಜೀವಗಳ ಸಂರಕ್ಷಣೆ ಮಾಡಬಹುದು ಎಂದರು.

ತನಲ್ ಆಶ್ರಮದ ಅಧ್ಯಕ್ಷ ಮೊಹಮ್ಮದ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸರಳ, ಸಾಜಿದಾ, ದಮಯಂತಿ, ಪ್ರಿಯಾಂಕಾ, ಮತ್ತು ದಿವ್ಯಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.