ಮಡಿಕೇರಿ, ಮೇ ೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೋಂಡಿರ ಹಾಗೂ ಚೆರಿಯಮನೆ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿವೆ.

ಮೊದಲ ಸುತ್ತಿನಲ್ಲಿ ತುಂತಜೆ ತಂಡ ಕೆದಂಬಾಡಿ ತಂಡದ ವಿರುದ್ದ ೮ ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕೆದಂಬಾಡಿ ತಂಡ ೩ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ತುಂತಜೆ ತಂಡ ವಿಕೆಟ್ ನಷ್ಟವಿಲ್ಲದೆ ೪.೨ ಓವರ್‌ಗಳಲ್ಲಿ ಗುರಿ ತಲುಪಿತು. ತೇನನ ಮತ್ತು ಕುಂಬನ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ತೇನನ ತಂಡ ಆರಂಭಿಕ ಆಟಗಾರ ಪವನ್ ಅವರ ಅರ್ಧ ಶತಕದ (೫೫) ನರವಿನಿಂದ ವಿಕೆಟ್ ನಷ್ಟವಿಲ್ಲದೆ ೯೬ ರನ್ ಗಳಿಸಿತು. ಗುರಿ ಬೆನ್ನತ್ತಿದ ಕುಂಬನ ತಂಡ ೪ ವಿಕೆಟ್ ನಷ್ಟಕ್ಕೆ ೬೩ ರನ್ ಗಳಿಸಲಷ್ಟೇ ಶಕ್ತವಾಯಿತು. ಬಿದ್ರುಪಣೆ ಮತ್ತು ನಂಗಾರು ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಂಗಾರು ತಂಡ ೨ ವಿಕಟ್ ನಷ್ಟಕ್ಕೆ ೫೫ ರನ್ ಗಳಿಸಿತು. ಬಿದ್ರುಪಣೆ ತಂಡ ೪ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಚೆರಿಯಮನೆ ಮತ್ತು ತೇನನ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚೆರಿಯಮನೆ ತಂಡ ಒಂದು ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿತು. ಗುರಿ ಬೆನ್ನತ್ತಿದ ತೇನನ ತಂಡ ೫೪ ರನ್ ಗಳಿಸಲಷ್ಟೇ ಶಕ್ತವಾಯ್ತು. ಎರಡನೇ ಸುತ್ತಿನ ಪಂದ್ಯಾಟದಲ್ಲಿ ಕುಂಞÂಳಿರ ತಂಡ ಅಂಚೆಮನೆ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಅಂಚೆಮನೆ ತಂಡ ೬ ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿತು. ಕುಂಞÂಳಿರ ತಂಡ ೨ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಚೆರಿಯಮನೆ (ಬಿಳಿಗೇರಿ) ಮತ್ತು ತುಂತಜೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೆರಿಯಮನೆ ತಂಡ ೪ ವಿಕೆಟ್ ನಷ್ಟಕ್ಕೆ ೪೦ ರನ್ ಗಳಿಸಿತು. ತುಂತಜೆ ತಂಡ ೩.೧ ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕರಕರನ ಮತ್ತು ಬೊಳ್ತಜೀರ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕರಕರನ ತಂಡ ಎರಡು ವಿಕೆಟ್ ನಷ್ಟಕ್ಕೆ ೫೮ ರನ್ ಗಳಿಸಿತು. ಬೊಳ್ತಜೀರ ತಂಡ ೭ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಲಷ್ಟೇ ಶಕ್ತವಾಯ್ತು.

ಮೂರನೇ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಳುಮುಡಿಯನ ತಂಡ ಎರಡು ವಿಕೆಟ್ ನಷ್ಟಕ್ಕೆ ೮೦ ರನ್ ಗಳಿಸಿತು. ಚೋಂಡಿರ ತಂಡ ೪.೨ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಕುಂಞÂಳಿರ ಮತ್ತು ಬಿದ್ರುಪಣೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕುಂಞÂಳಿರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿತು. ಬಿದ್ರುಪಣೆ ತಂಡ ೩.೧ ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚೆರಿಯಮನೆ ಮತ್ತು ತುಂತಜೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೆರಿಯಮನೆ ತಂಡ ೫ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿತು. ತುಂತಜೆ ತಂಡ ೬ ವಿಕೆಟ್ ಕಳೆದುಕೊಂಡು ೨೨ ರನ್ ಗಳಿಸಲಷ್ಟೇ ಶಕ್ತವಾಯ್ತು. ಕರಕರನ ಮತ್ತು ಯಾಪರೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕರಕರನ ತಂಡ ೪ ವಿಕೆಟ್ ನಷ್ಟಕ್ಕೆ ೭೬ ರನ್ ಗಳಿಸಿತು. ಗುರಿ ಬೆನ್ನತ್ತಿದ ಯಾಪರೆ ತಂಡ ೫ ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ನಾಲ್ಕನೇ ಸುತ್ತಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚೋಂಡಿರ ತಂಡ ೪ ವಿಕೆಟ್ ನಷ್ಟಕ್ಕೆ ೫೫ ರನ್ ಗಳಸಿತು. ಗುರಿ ಬೆನ್ನತ್ತಿದ ಬಿದ್ರುಪಣೆ ತಂಡ ೫ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಲಷ್ಟೇ ಶಕ್ತವಾಯ್ತು.

ಚೆರಿಯಮನೆ ಮತ್ತು ಕರಕರನ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಚೆರಿಯಮನೆ ತಂಡ ೨ ವಿಕೆಟ್ ನಷ್ಟಕ್ಕೆ ೯೧ ರನ್ ಗಳಸಿತು. ಗುರಿ ಬೆನ್ನತ್ತಿದ ಕರಕರನ ತಂಡ ೨ ವಿಕೆಟ್ ನಷ್ಟಕ್ಕೆ ೮೩ ರನ್ ಗಳಿಸಲಷ್ಟೇ ಶಕ್ತವಾಯ್ತು.