ಪೊನ್ನಂಪೇಟೆ, ಮೇ. ೪: ಗೋಣಿಕೊಪ್ಪದ ಬಾಸ್ಕೆಟ್‌ಬಾಲ್ ಕ್ಲಬ್ ವತಿಯಿಂದ ಕಾವೇರಿ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಉಚಿತ ಬಾಸ್ಕೆಟ್ ಬಾಲ್ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.

೧೩ ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ೩೦ ಮಕ್ಕಳು ಪಾಲ್ಗೊಂಡು ತರಬೇತಿ ಪಡೆದುಕೊಂಡರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಬಾಸ್ಕೆಟ್ ಬಾಲ್ ಆಟಗಾರ ಬಾಳೆಯಡ ಕೆ. ಉತ್ತಯ್ಯ ಮಾತನಾಡಿ, ಬಾಸ್ಕೆಟ್ ಬಾಲ್ ಕ್ಲಬ್, ಬಾಸ್ಕೆಟ್‌ಬಾಲ್ ಪಟುಗಳನ್ನು ತಯಾರು ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳು ತರಬೇತಿ ಮುಗಿಸಿ ಮನೆಯಲ್ಲಿ ಸುಮ್ಮನೆ ಕೂರುವ ಬದಲು, ಪ್ರತಿದಿನ ಚಟುವಟಿಕೆಯಿಂದ ಅಭ್ಯಾಸ ಮಾಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕು. ದೈಹಿಕವಾಗಿ ಸಮರ್ಥರಾಗಿದ್ದಾಗ ಮಾತ್ರ ಆಟೋಟಗಳಲ್ಲಿ ಭಾಗವಹಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ದೈಹಿಕ ಕ್ಷಮತೆ ಉತ್ತಮವಾಗಿದ್ದರೆ ಸಾಧನೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ತರಬೇತಿಯಿಂದ ಪಡೆದ ಕೌಶಲ್ಯವನ್ನು ಕ್ರೀಡೆಯಲ್ಲಿ ಬಳಸಿಕೊಂಡು ವೃತ್ತಿಜೀವನದಲ್ಲೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಕ್ರೀಡೆಯೊಂದಿಗೆ ಮುನ್ನಡೆಯುವ ಹವ್ಯಾಸವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿ.ಬಿ ಸಿ ಕ್ಲಬ್ ಮೂಲಕ ಸಾವಿರಾರು ಕ್ರೀಡಾಪಟುಗಳು ತಮ್ಮ ಭವಿಷ್ಯ ನಿರ್ಮಿಸಿಕೊಂಡಿದ್ದಾರೆ.

ಕ್ರೀಡಾಭಿಮನಿಗಳು, ಕ್ರೀಡಾ ಪ್ರೇಮಿಗಳು ಹಾಗೂ ದಾನಿಗಳ ಸಹಕಾರದಿಂದ ಈ ಶಿಬಿರ ಯಶಸ್ಸುಕಂಡಿದ್ದು, ಹಿರಿಯ ಬಾಸ್ಕೆಟ್ ಬಾಲ್ ಪಟು ಪಳಂಗAಡ ವಾಣಿ ಚಂಗಪ್ಪ ಅವರು, ತಮಗೆ ಸಿಕ್ಕ ಅವಕಾಶ ಮಕ್ಕಳಿಗೂ ಸಿಗಲಿ ಎಂಬ ಉದ್ದೇಶದಿಂದ, ಮತ್ತು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಶಿಬಿರವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶಿಬಿರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೌಶಲ್ಯಗಳನ್ನು ಕಲಿಸಿಕೊಡುವ ಮೂಲಕ, ಆಟಗಾರರಿಗೆ ಉತ್ತಮ ತರಬೇತಿ ನೀಡಲಾಗಿದೆ. ಮಕ್ಕಳು ಶಿಸ್ತು, ಸಂಯಮ, ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಬೇಕು ಎಂದರು. ಕ್ಲಬ್‌ನ ಉಪಾಧ್ಯಕ್ಷೆ ಪಳಂಗAಡ ವಾಣಿ ಚಂಗಪ್ಪ ಮಾತನಾಡಿ, ೧೯೭೩ರಲ್ಲಿ ಚೆಪ್ಪುಡಿರ ಶುಭಾಷ್ ಮುತ್ತಣ್ಣ ಸ್ಥಾಪಕ ಅಧ್ಯಕ್ಷರಾಗಿ ಕ್ಲಬ್ ಸ್ಥಾಪಿಸಿ ಕ್ರೀಡೆಗೆ ಉತ್ತೇಜನ ನೀಡಿದರು. ಚೆಪ್ಪುಡಿರ ತಮ್ಮಿ ಮಾದಯ್ಯ, ಮನೆಯಪಂಡ ಸುಬ್ಬಯ್ಯ, ಮನೆಯಪಂಡ ಉತ್ತಪ್ಪ ಸೇರಿದಂತೆ ಹಲವರು ಶ್ರಮವಹಿಸಿದ್ದಾರೆ ಎಂದರು. ಕಾರ್ಯದರ್ಶಿ ಚೆಪ್ಪುಡೀರ ಅಪ್ಪಣ್ಣ ಹಾಗೂ ಪದಾಧಿಕಾರಿಗಳಾದ ಬುಟ್ಟಿಯಂಡ ಚೆಂಗಪ್ಪ, ಪಳಂಗAಡ ಸುರೇಶ್ ಚಂಗಪ್ಪ, ಕುಪ್ಪಂಡ ನಾಚಪ್ಪ, ಕಂಜಿತAಡ ಪೊನ್ನಪ್ಪ, ಬಾಳೆಯಡ ಗೌರಮ್ಮ ಹಾಗೂ ಕ್ಲಬ್ ನ ಸದಸ್ಯರು ಸೇರಿ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದಾರೆ. ಅನೇಕ ಕ್ರೀಡಾಪ್ರೇಮಿಗಳ ಹಾಗೂ ದಾನಿಗಳ ಸಹಕಾರದಿಂದ ಬಾಸ್ಕೆಟ್ ಬಾಲ್ ಶಿಬಿರ ಯಶಸ್ಸು ಕಾಣಲು ಸಾಧ್ಯವಾಗಿದೆ.

ಶಿಬಿರದ ತರಬೇತುದಾರರಾದ ನಿವೃತ್ತ ಬಿಎಸ್‌ಎಫ್ ಯೋಧ ಚೋಯಮಾಡಂಡ ಸನ್ನು ಗಣಪತಿ ಅವರು ಮಕ್ಕಳಿಗೆ ಉತ್ತಮ ಕೌಶಲ್ಯಭರಿತ ತರಬೇತಿ ನೀಡಿದ್ದಾರೆ ಎಂದರು. ಇದೇ ಸಂದರ್ಭ ಕೊಡಗಿನ ಪ್ರತಿಷ್ಠಿತ ಮಾಸ್ಟರ್ಸ್ ಆಟಗಾರ್ತಿಯರ ಎರಡು ತಂಡದ ನಡುವೆ ಮತ್ತು, ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಎರಡು ಮಕ್ಕಳ ತಂಡಗಳ ನಡುವೆ ಏರ್ಪಡಿಸಲಾಗಿದ್ದ ಪ್ರದರ್ಶನ ಪಂದ್ಯ, ನೆರೆದಿದ್ದವರಿಗೆ ಕ್ರೀಡಾ ರಸದೌತಣ ನೀಡಿತು. ಕ್ಲಬ್ ನ ಕಾರ್ಯದರ್ಶಿ ಚೆಪ್ಪುಡಿರ ಅಪ್ಪಣ್ಣ ಶಿಬಿರದ ಯಶಸ್ವಿಗೆ ಶ್ರಮಿಸಿದ ಸರ್ವರಿಗೂ ವಂದಿಸಿದರು.