ಗೋಣಿಕೊಪ್ಪ ವರದಿ, ಮೇ. ೭: ಮುಲ್ಲೇಂಗಡ ಕುಟುಂಬ ವತಿಯಿಂದ ಕಂಡAಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮೊದಲನೇ ವರ್ಷದ ಕೊಡವ ಕೌಟುಂಬಿಕ ಮುಲ್ಲೇಂಗಡ ಕಬಡ್ಡಿ ನಮ್ಮೆಯ ಎರಡನೇ ದಿನ ಹಲವು ತಂಡಗಳು ಮುನ್ನಡೆ ಸಾಧಿಸಿದವು.
ಪೆಮ್ಮಂಡ ೩೮-೧೮ ಅಂಕಗಳ ಮೂಲಕ ಪಂದ್ಯAಡ ತಂಡವನ್ನು ಮಣಿಸಿತು. ಹೊಟ್ಟೆಂಗಡ ೪೩-೪೨ ಅಂಕಗಳಿAದ ಕೊಂಗAಡ ತಂಡವನ್ನು ಪರಾಭವಗೊಳಿಸಿತು. ಕನ್ನಿಗಂಡ ಗೈರಿನಿಂದ ಕೂತಂಡ ಜಯ ಪಡೆದುಕೊಂಡಿತು. ಚೆಕ್ಕೆರ ತಂಡ ಚೊಟ್ಟೆಯಂಡ ತಂಡವನ್ನು ೨೪-೧೬ ಅಂಕಗಳ ಮೂಲಕ ಮಣಿಸಿತು. ಬಿರುನಾಣಿ ಕರ್ತಮಾಡ ತಂಡ ಆತಿಥೇಯ ಮುಲ್ಲೇಂಗಡ ವಿರುದ್ದ ೨೫-೧೨ ಅಂಕಗಳ ಮೂಲಕ ಜಯಿಸಿತು. ಬೊಟ್ಟಂಗಡ ಕುಟುಂಬಕ್ಕೆ ಕೆಂಜAಗಡ ವಿರುದ್ದ ೪೬-೧೬ ಅಂಕಗಳ ಜಯ ದೊರೆಯಿತು. ಕುಪ್ಪಣಮಾಡ ತಂಡ ನಂದಿನೆರವAಡ ವಿರುದ್ಧ ೨೬-೧೪ ಅಂಕಗಳಿAದ ಗೆದ್ದು ಬೀಗಿತು. ಚೆಪ್ಪುಡೀರ ತಂಡ ಚೆಯ್ಯಂಡ ಕುಟುಂಬದ ವಿರುದ್ದ ೩೧-೮ ಅಂಕಗಳಿAದ ಜಯ ಸಂಪಾದಿಸಿತು. ಮಾಚಿಮಾಡ ತಂಡ ೨೫-೨೩ ಅಂಕಗಳ ಮೂಲಕ ಮಾಣಿರ (ವೆಸ್ಟ್ ನೆಮ್ಮಲೆ) ವಿರುದ್ದ ಜಯ ಪಡೆದುಕೊಂಡಿತು. ಪೆಮ್ಮಂಡ ಕುಟುಂಬ ಹೊಟ್ಟೇಂಗಡ ವಿರುದ್ಧ ೩೬-೧೦ ಅಂಕಗಳಿAದ ಜಯ ಸಾಧಿಸಿತು. ಮುಕ್ಕಾಟೀರ (ಹರಿಹರ) ತಂಡ ಚೆಕ್ಕೇರ ತಂಡವನ್ನು ೨೯-೧೫ ಅಂಕಗಳಿAದ ಮಣಿಸಿತು.
ಕೂತಂಡ ತಂಡ ಮಾಣೀರ (ಈಸ್ಟ್ ನೆಮ್ಮಲೆ) ತಂಡವನ್ನು ೨೧-೧೦ ಅಂಕಗಳಲ್ಲಿ ಸೋಲಿಸಿತು. ಕರ್ತಮಾಡ (ಬಿರುನಾಣಿ) ತಂಡ ಪೊನ್ನಿಮಡ ವಿರುದ್ಧ ೨೭-೮ ಅಂಕಗಳ ಜಯ ದೊರೆಯಿತು. ಬೊಟ್ಟಂಗಡ ತಂಡ ಕುಪ್ಪಣಮಡ ತಂಡವನ್ನು ೨೯-೪ ಅಂಕಗಳಿAದ ಸೋಲಿಸಿತು. ಚೆಪ್ಪುಡಿರ ತಂಡ ೨೩-೧೧ ಅಂಕಗಳ ಮೂಲಕ ಅರಮಣಮಡ ತಂಡವನ್ನು ಮಣಿಸಿತು. ಮಾಚಿಮಾಡ ತಂಡ ಚೀಯಕ್‌ಪೂವಂಡ ತಂಡವನ್ನು ೨೫-೧೦ ಅಂಕಗಳಿAದ ಮಣಿಸಿತು.