ಶನಿವಾರಸಂತೆ, ಮೇ ೭: ಸ್ಥಳೀಯ ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಇರುವ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ದೇವಿಯ ವಾರ್ಷಿಕೋತ್ಸವ, ಸಾಮೂಹಿಕ ಉಪನಯನ ಮತ್ತು ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ, ನವಗ್ರಹಾರಾಧನೆ, ಮಾತೃ ಸಹಬೋಜನ, ಗಣ ಹೋಮ ಹಾಗೂ ದುರ್ಗಾಹೋಮ ಸಹಿತವಾಗಿ ಉಪನಯನ, ಅಂಗ ಹೋಮ, ವಟುಗಳಿಗೆ ಯಜ್ಞೋಪವೀತ ಧಾರಣೆ ಬ್ರಹ್ಮೋಪದೇಶ ಕಾರ್ಯಕ್ರಮ ನೆರವೇರಿತು. ೧೪ ವಟುಗಳಿಗೆ ಉಪನಯನ ದೀಕ್ಷೆ ನೀಡಲಾಯಿತು. ದೇವಿಗೆ ಸಾಮೂಹಿಕ ಕುಂಕುಮಾರ್ಚನೆ, ಮಹಾಮಂಗಳಾರತಿಯಾಗಿ ತೀರ್ಥ ಪ್ರಸಾದ ವಿನಿಯೋಗವಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನAದ ಸರಸ್ವತಿ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಪ್ರಧಾನ ಪೌರೋಹಿತ್ಯವನ್ನು ಹಾಸನದ ವೇದ ಬ್ರಹ್ಮ ಎಚ್.ಡಿ.ಪ್ರದೀಪ್ ಶರ್ಮ, ಶ್ರೀ ಕಾಳಿಕಾಂಬ ದೇವಸ್ಥಾನದ ಪುರೋಹಿತ ಮುಳ್ಳೂರು ಶರತ್, ಹಾಗೂ ಸ್ಥಳೀಯ ಪುರೋಹಿತರು ನೆರವೇರಿಸಿದರು. ವಿವಿಧೆಡೆಯ ನೂರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದಾವಣಗೆರೆಯ ವಡ್ಡನಹಾಳ್ ಕಾಶಿಮಠದ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನAದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ನಂತರ ಅವರು ಆಶೀರ್ವಚನ ನೀಡುತ್ತಾ, ವಿಶ್ವಕರ್ಮ ಜನಾಂಗ ಎಲ್ಲಾ ರೀತಿಯ ಚಿಂತನೆಯಿAದ ಸಂಸ್ಕಾರವುಳ್ಳ ಜನಾಂಗವಾಗಿದೆ. ಭಾರತೀಯ ಸಂಸ್ಕೃತಿಯ ರೂವಾರಿಗಳಾಗಿರುವ ವಿಶ್ವಕರ್ಮ ಜನಾಂಗದವರು ಅಲ್ಪಸಂಖ್ಯಾತರಾಗಿರುವ ಕಾರಣ ಸಮಾಜದಲ್ಲಿ ರಾಜಕೀಯವಾಗಿ ಕಡೆಗಣಿಸಲ್ಪಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿದ್ಯೆಯ ಜತೆಗೆ ಪರಂಪರೆಯ ಪರಿಚಯ ಮಾಡಿಕೊಡಬೇಕು. ಮಕ್ಕಳಲ್ಲಿ ಅನುಕರಣೆಯ ಸ್ವಭಾವ ಇರುವುದರಿಂದ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ತಾಯಿಯ ಮಡಿಲಲ್ಲಿ ನಡೆಯುತ್ತದೆ. ಸಂಪಾದಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ ಮಾಡಬೇಕು. ಅನ್ನದಾನ ಶ್ರೇಷ್ಠವಾದ ದಾನವಾಗಿದ್ದು, ಹಿಂದೂ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಕುಶಾಲನಗರ ಶ್ರೀವಿಶ್ವಕರ್ಮ ಸಮಾಜದ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ಜ್ಞಾನಕ್ಕೆ ಮಿಗಿಲಾದುದು ಜಗತ್ತಿನಲ್ಲಿ ಯಾವುದು ಇಲ್ಲ. ವಿಶ್ವಕರ್ಮದವರ ವೃತ್ತಿ ವೈವಿಧ್ಯಮಯವಾಗಿದೆ. ಸಂಸ್ಕಾರ, ಉತ್ತಮ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಧಾನ ಪುರೋಹಿತ ಹಾಸನದ ಎಚ್.ಡಿ.ಪ್ರದೀಪ್ ಶರ್ಮ ಪ್ರಾಸ್ತಾವಿಕ ನುಡಿಗಳನ್ನಾಡಿ, ಋಷಿ ಪರಂಪರೆಯಿAದ ಬಂದ ವಂಶ ವಿಶ್ವಕರ್ಮ ಜನಾಂಗವಾಗಿದೆ ಎಂದರು.

ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಶ್ರೀ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಬಿ. ನಾಗರಾಜ್ ಮಾತನಾಡಿ, ೨೦೧೬ ರಲ್ಲಿ ಪ್ರತಿಷ್ಠಾಪನೆಯಾದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮದಿಂದ ವಾರ್ಷಿಕೋತ್ಸವ ಆಚರಣೆಯಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನದ ಬಳಿ ಯಾತ್ರಿಭವನ, ಗುರುಕುಟೀರವನ್ನು ನಿರ್ಮಿಸುವ ಯೋಜನೆಯಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಶಂಕರಾತ್ಮಾನAದ ಸರಸ್ವತಿ ಸ್ವಾಮೀಜಿ ಅವರಿಗೆ ಪುಷ್ಪಾರ್ಚನೆ ಮಾಡಿ, ಗೌರವಿಸಲಾಯಿತು. ವೇದಬ್ರಹ್ಮ ಶ್ರೀ ಎಚ್.ಡಿ. ಪ್ರದೀಪ್ ಶರ್ಮ ಹಾಗೂ ಶ್ರೀಕಾಳಿಕಾಂಬ ದೇವಸ್ಥಾನದ ಪುರೋಹಿತ ಮುಳ್ಳೂರು ಶರತ್ ವೇದಘೋಷ ಮಾಡಿದರು. ಯಶಸ್ವಿನಿ ಪ್ರಾರ್ಥಿಸಿ, ಬಿ.ಬಿ. ನಾಗರಾಜ್ ಸ್ವಾಗತಿಸಿ, ಶರತ್ ಮುಳ್ಳೂರು ನಿರೂಪಿಸಿದರು.