ಸುಂಟಿಕೊಪ್ಪ, ಮೇ ೭: ಇಲ್ಲಿನ ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರೇ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ ಧ್ವಜಾರೋಹಣವನ್ನು ನೇರವೇರಿಸುವ ಮೂಲಕ ಚಾಲನೆ ನೀಡಿದರು. ಧ್ವಜಾ ರೋಹಣ ಬಳಿಕ ದೇವಾಲಯದಲ್ಲಿ ಆಡಂಬರ ದಿವ್ಯ ಬಲಿಪೂಜೆಯನ್ನು ರೇ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ, ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ಜಾರ್ಜ್ ದೀಪಕ್, ಬೆಂಗಳೂರಿನ ಧರ್ಮಗುರುಗಳು ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ಅವರುಗಳು ನೆರವೇರಿಸಿದರು. ತಾ. ೮ ರಂದು (ಇಂದು) ಸಂಜೆ ೫.೩೦ ಗಂಟೆಗೆ ಬಲಿಪೂಜೆ ಹಾಗೂ ಆರಾಧನೆಯನ್ನು ಕೆ.ಆರ್.ಪೇಟೆಯ ಬಾಲ ಯೇಸುವಿನ ದೇವಾಲಯದ ಧರ್ಮಗುರು ಟಿ.ಪೌಲೂಸ್ ಅವರುಗಳು ನೆರವೇರಿಸಲಿದ್ದಾರೆ.