ಮಡಿಕೇರಿ, ಮೇ ೭: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ - ೨೦೨೬ ಕ್ರಿಕೆಟ್ ಪಂದ್ಯಾಟದಲ್ಲಿ ಪಡ್ಪು ಹಾಗೂ ಬೈಮನ ತಂಡ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿದೆ.
ಕಂಡಿಗೆ ವಿರುದ್ಧ ಪಡ್ಪುಮನೆ ೯ ವಿಕೆಟ್‌ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಕಂಡಿಗೆ ೫ ವಿಕೆಟ್ ನಷ್ಟಕ್ಕೆ ೨೩ ರನ್ ದಾಖಲಿಸಿತು. ಪಡ್ಪುಮನೆ ತಂಡ ೧.೩ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೨೫ ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಪೊನ್ನಚ್ಚನ ಹಾಗೂ ಯಾಲದಾಳು ನಡುವಿನ ಪಂದ್ಯದಲ್ಲಿ ಪೊನ್ನಚ್ಚನ ೪೩ ರನ್‌ಗಳ ಜಯ ದಾಖಲಿಸಿತು. ಪೊನ್ನಚ್ಚನ ೨ ವಿಕೆಟ್ ನಷ್ಟಕ್ಕೆ ೯೬ ರನ್ ಗಳಿಸಿತು. ಯಾಲದಾಳು ೧ ವಿಕೆಟ್ ನಷ್ಟಕ್ಕೆ ೫೩ ರನ್ ಮಾತ್ರ ಗಳಿಸಿ ಪರಾಭವಗೊಂಡಿತು. ಪೊನ್ನಚ್ಚನ ಪರ ಮಂಜು ೮ ಸಿಕ್ಸರ್ ಸಹಿತ ೧೭ ಬಾಲ್‌ಗೆ ೫೬ ರನ್ ಗಳಿಸಿ ಮಿಂಚಿದರು.
ನೆಯ್ಯಣಿ ಹಾಗೂ ಕಾಳಮನೆ ನಡುವಿನ ಪಂದ್ಯದಲ್ಲಿ ನೆಯ್ಯಣಿ ಜಯ ಗಳಿಸಿತು. ನೆಯ್ಯಣಿ ೫ ವಿಕೆಟ್ ನಷ್ಟಕ್ಕೆ ೭೧ ರನ್ ದಾಖಲಿಸಿತು. ಕಾಳಮನೆ ೩ ವಿಕೆಟ್ ನಷ್ಟಕ್ಕೆ ೫೬ ರನ್ ಬಾರಿಸಿ ಸೋಲನುಭವಿಸಿತು. ಗುಡ್ಡೆಮನೆ ವಿರುದ್ಧ ಪೊನ್ನಚ್ಚನ ೨೩ ರನ್‌ಗಳ ಜಯ ಪಡೆಯಿತು. ಪೊನ್ನಚ್ಚನ ೩ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿತು. ಗುಡ್ಡೆಮನೆ ೭ ವಿಕೆಟ್ ನಷ್ಟಕ್ಕೆ ೨೯ ರನ್ ಬಾರಿಸಿ ಸೋಲನುಭವಿಸಿತು. ಬಂಗಾರಕೋಡಿ ವಿರುದ್ಧ ಪಡ್ಪುಮನೆ ೪೦ ರನ್‌ಗಳ ಜಯ ದಾಖಲಿಸಿತು. ಪಡ್ಪುಮನೆ ೧ ವಿಕೆಟ್ ನಷ್ಟಕ್ಕೆ ೭೩ ರನ್ ಕಲೆಹಾಕಿತು. ಬಂಗಾರಕೋಡಿ ೩ ವಿಕೆಟ್ ನಷ್ಟಕ್ಕೆ ೩೩ ರನ್ ಗಳಿಸಿ ಸೋತಿತು. ನೆಯ್ಯಣಿ ವಿರುದ್ಧ ದೇವಾಯಿರ ಜಯ ಗಳಿಸಿತು. ನೆಯ್ಯಣಿ ೬ ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ದೇವಾಯಿರ ೧ ವಿಕೆಟ್ ನಷ್ಟಕ್ಕೆ ೬೭ ರನ್ ಕಲೆ ಹಾಕಿ ಗೆಲುವು ಪಡೆಯಿತು. ದೇವಾಯಿರ ವಿರುದ್ಧ ಬೈಮನ ೯ ರನ್‌ಗಳ ಜಯ ಪಡೆಯಿತು. ಬೈಮನ ೩ ವಿಕೆಟ್ ನಷ್ಟಕ್ಕೆ ೬೮ ರನ್ ದಾಖಲಿಸಿತು. ದೇವಾಯಿರ ೩ ವಿಕೆಟ್ ನಷ್ಟಕ್ಕೆ ೫೯ ರನ್ ದಾಖಲಿಸಿ ಪರಾಜಿತಗೊಂಡಿತು. ಅಯ್ಯಂಡ್ರ ವಿರುದ್ಧ ಪಡ್ಪುಮನೆ ೭ ವಿಕೆಟ್‌ಗಳ ಜಯ ಸಾಧಿಸಿತು. ಅಯ್ಯಂಡ್ರ ೪ ವಿಕೆಟ್ ನಷ್ಟಕ್ಕೆ ೩೬ ರನ್ ದಾಖಲಿಸಿತು. ಪಡ್ಪುಮನೆ ೩ ವಿಕೆಟ್ ನಷ್ಟಕ್ಕೆ ೩೭ ರನ್ ದಾಖಲಿಸಿ ಗೆಲುವಿನ ನಗೆ ಬೀರಿತು.