ಮಡಿಕೇರಿ, ಮೇ ೮: ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ೪೮ ಗಂಟೆಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ. ಮಡಿಕೇರಿಯ ಕೊಡವ ಮಂದ್ನಲ್ಲಿ ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ತಾ. ೧೪ ರಂದು ಬೆಳಿಗ್ಗೆ ೧೦.೩೦ ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಸತ್ಯಾಗ್ರಹದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರ ನೀಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತದ ರಾಷ್ಟçಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡವರಿಗೆ ಮಾತ್ರ ಮೀಸಲಾದ ವಿಶೇಷ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ನೀಡಬೇಕು ಅಥವಾ ಸಿಕ್ಕಿಂನ ಸಂಘ ಕ್ಷೇತ್ರದ ಮಾದರಿಯಲ್ಲಿ ಕೊಡವ ಕ್ಷೇತ್ರಗಳನ್ನು ಸೃಷ್ಟಿಸಬೇಕು. ಶೇ. ೩೩ರ ಮಹಿಳಾ ಮೀಸಲಾತಿಯೊಳಗೆ ಕೊಡವ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಲಾಗುವುದು. ೨೦೨೭ರ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು. ೧೮೭೧-೧೯೩೧ರವರೆಗೆ ಇದ್ದಂತೆ ಸ್ವತಂತ್ರ ಜನಾಂಗ ಎಂದು ದಾಖಲಿಸಬೇಕು. ವಿಧಿ ೨೫ ಮತ್ತು ೨೬ರ ಅಡಿಯಲ್ಲಿ ಗನ್-ತೋಕ್ (ಶಸ್ತಾçಚರಣೆ) ಧಾರ್ಮಿಕ ಹಕ್ಕನ್ನು ರಕ್ಷಿಸಬೇಕು. ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್ಗೆ ಸೇರಿಸಿ ಶಾಸ್ತಿçÃಯ ಭಾಷಾ ಸ್ಥಾನಮಾನ ನೀಡಬೇಕು ಸೇರಿ ಇನ್ನಿತರ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.