ಮಡಿಕೇರಿ, ಮೇ ೮: ಕುಶಾಲನಗರ, ಪಿರಿಯಾಪಟ್ಟಣ, ಅರಕಲಗೂಡು, ಹುಣಸೂರು, ಕೆ.ಆರ್. ನಗರ ಹಾಗೂ ಸಾಲಿಗ್ರಾಮ ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ತಾ. ೯ ರಿಂದ ೧೩ ರವರೆಗೆ ದಿನವೊಂದಕ್ಕೆ ಜಲಾಶಯದಿಂದ ನದಿಗೆ ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಲು ಹಾರಂಗಿ ಜಲಾಶಯ ಕುಡಿಯುವ ನೀರಿನ ಸಮಿತಿ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು, ಈ ಹಿನ್ನೆಲೆ ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಐ.ಕೆ. ಪುಟ್ಟಸ್ವಾಮಿ ಕೋರಿದ್ದಾರೆ.