*ಗೋಣಿಕೊಪ್ಪ, ಮೇ ೮: ಬೀರುಗ ಗ್ರಾಮದ ಚಪ್ಪಡಿಕೊಲ್ಲಿ ಶ್ರೀ ಪಾಲ್ ಪರ್ ಚಾಮುಂಡೇಶ್ವರಿ ವಿಷ್ಣುಮೂರ್ತಿ ದೇವರ ವಾರ್ಷಿಕೋತ್ಸವ ತಾ. ೯ ರಿಂದ ೧೨ ರ ತನಕ ನಡೆಯಲಿದೆ.

ತಾ. ೯ ರ ಬೆಳಿಗ್ಗೆ ೫ ಗಂಟೆಗೆ ಇರುಬಳಕು, ಹರಕೆ ಬಳಕು, ಪ್ರಸಾದ ವಿತರಣೆ, ಸಂಜೆ ೪ ಗಂಟೆಗೆ ನೆರಪು, ಗರ್ಭಗುಡಿಯಿಂದ ದೇವರು ಹೊರಬರುವುದು, ಅಲಂಕಾರ, ಪೂಜೆ ಮಹಾಪೂಜೆ, ದೇವರ ಶಯನ, ತಾ. ೧೦ ರಂದು ಬೆಳಿಗ್ಗೆ ದೇವರ ಉತ್ಸವ ಮೂರ್ತಿಗೆ ಅಭಿಷೇಕ. ನಿತ್ಯ ಪೂಜೆ, ಅಲಂಕಾರ ಪೂಜೆ, ತುಲಾಭಾರ ಸೇವೆ, ಸಂಜೆ ೫ಕ್ಕೆ ದೇವರ ನರ್ತನ, ದೇವರ ಆವಭೃತ ಸ್ನಾನ, ವಸಂತ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ ಸೇರಿದಂತೆ ಹಲವು ಸೇವೆಗಳು ನಡೆಯಲಿವೆ.

ತಾ. ೧೧ ರಂದು ಶುದ್ಧ ಕಲಶ, ಅಲಂಕಾರ ಪೂಜೆ, ಮಹಾಪೂಜೆ, ಮತ್ತು ಚಾಮುಂಡಿ ದೇವರ ತೋತಾ ತೆರೆ, ಕುಟ್ಟಿಚಾತ ತೆರೆ ಭೈರವ ತೆರೆ, ಕರಿಬಾಳ ಭಗವತಿ ತೆರೆ, ನುಚ್ಚಟೆ ತೆರೆ ನಡೆಯಲಿದೆ.

ತಾ. ೧೨ ರಂದು ಬೆಳಗ್ಗೆ ೯:೩೦ಕ್ಕೆ ಈಶ್ವರ ದೇವರ ದರ್ಶನ ಚಾಮುಂಡಿ ದೇವರ ದರ್ಶನ, ವಿಷ್ಣುಮೂರ್ತಿ ತೆರೆ ಮೇಲೆರಿ ಬೀಳುವುದು ಮತ್ತು ಭಕ್ತಾದಿಗಳಿಂದ ಹರಕೆ ಕಾಣಿಕೆಗಳು ಅರ್ಪಿಸುವುದು ಸೇರಿದಂತೆ ವಿವಿಧ ಪೂಜೆ ವಿಧಾನಗಳು ನಡೆಯಲಿವೆ ಎಂದು ದೇವಸ್ಥಾನದ ಮುಖ್ಯಸ್ಥ ಚೆಕ್ಕೆರೆ ನಾಣಯ್ಯ ತಿಳಿಸಿದ್ದಾರೆ.