ಮಡಿಕೇರಿ, ಮೇ ೮: ಮೂರ್ನಾಡು ಫೀಡರ್‌ನಲ್ಲಿ ತಾ. ೧೦ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಟೌನ್, ಮುತ್ತಾರ್‌ಮುಡಿ, ಕುಂಬಳದಾಳು, ಕಿಗ್ಗಾಲು, ಕಬಡಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಭಾಗಮಂಡಲ ಫೀಡರ್‌ನಲ್ಲಿ ತಾ. ೧೧ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಮಳೆಗಾಲದ ಮುಂಜಾಗ್ರತಾ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ತಾಳತ್ತಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಸೋಮವಾರಪೇಟೆ, ಮೇ ೮: ತಾ. ೯ ರಂದು (ಇಂದು) ಚಪ್ಪೇಶ್ವರ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯವಿರುವುದರಿಂದ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆವರೆಗೆ ಕಿರಗಂದೂರು, ತಾಕೇರಿ, ಹರಗ, ಕುಂಬಾರ ಗಡಿಗೆ ಗ್ರಾಮಗಳಲ್ಲಿ ವಿದ್ಯುತ್ ವ್ಯತಯವಾಗಲಿದೆ ಎಂದು ಸೆಸ್ಕ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್ ತಿಳಿಸಿದ್ದಾರೆ.