ಗೋಣಿಕೊಪ್ಪ ವರದಿ, ಮೇ ೮: ಮುಲ್ಲೇಂಗಡ ಕುಟುಂಬ ವತಿಯಿಂದ ಕಂಡAಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮೊದಲನೇ ವರ್ಷದ ಕೊಡವ ಕೌಟುಂಬಿಕ ಮುಲ್ಲೇಂಗಡ ಕಬಡ್ಡಿ ನಮ್ಮೆಯ ಮೂರನೇ ದಿನ ಪಂದ್ಯಗಳಲ್ಲಿ ೧೩ ತಂಡಗಳು ಗೆಲುವು ಪಡೆದುಕೊಂಡಿವೆ

ಮಲ್ಲAಡ ತಂಡ ಮಾಳೇಟಿರ ವಿರುದ್ದ ಜಯಿಸಿತು. ನೆರವಂಡ ತಂಡ ಕಟ್ಟೇರ ವಿರುದ್ಧ ೨೮-೧೦ ಅಂಕಗಳಿAದ ಜಯ ಸಾಧಿಸಿತು. ಚೊಟ್ಟೆಯಂಡಮಾಡ ೨೮-೨೧ ಅಂಕಗಳೊAದಿಗೆ ಚಂಗುಲAಡ ವಿರುದ್ಧ ಗೆಲುವು ದೊರೆಯಿತು. ಕುಟ್ಟಂಡ (ಮಾದಾಪುರ) ೨೨-೧೨ ಅಂಕಗಳಿAದ ದೇಯಂಡ ತಂಡವನ್ನು ಸೋಲಿಸಿತು. ಕಂಬೇಯAಡ ಚಂದುರ ತಂಡವನ್ನು ೨೫-೧೦ ಅಂಕಗಳ ಮೂಲಕ ಪರಾಭವಗೊಳಿಸಿತು.

ಮಾಣಿಪಂಡ ವಾಕ್‌ಓವರ್ ಮೂಲಕ ಮೀದೇರಿರ ವಿರುದ್ಧ ಜಯ ಪಡೆದುಕೊಂಡಿತು. ಕಾಳಿಮಾಡ ಬೊಟ್ಟೋಳಂಡ ತಂಡವನ್ನು ೩೨-೧೪ ಅಂಕಗಳಿAದ ಮಣಿಸಿತು. ಪೆಮ್ಮಂಡ ತಂಡ ಮುಕ್ಕಾಟಿರ (ಹರಿಹರ) ವಿರುದ್ಧ ೩೧-೧೮ ಅಂಕಗಳ ಗೆಲುವು ಲಭಿಸಿತು. ಕರ್ತಮಾಡ (ಬಿರುನಾಣಿ) ತಂಡ ೨೮-೨೬ ಅಂಕಗಳ ಮೂಲಕ ಬೊಟ್ಟಂಗಡ ವಿರುದ್ಧ ಜಯ ಸಂಪಾದಿಸಿತು. ಚೆಪ್ಪುಡಿರ ಮಾಚಿಮಾಡ ವಿರುದ್ಧ ೩೭-೧೮ ಅಂಕಗಳ ಗೆಲುವು ಪಡೆದುಕೊಂಡಿತು. ಮಾಚಂಗಡ ಚೊಟ್ಟೆಯಂಡಮಾಡ ವಿರುದ್ಧ ಗೆಲುವು ಪಡೆದುಕೊಂಡಿತು.

ಕುಟ್ಟಂಡ (ಮಾದಾಪುರ) ಕೂತಂಡ ವಿರುದ್ಧ ಜಯ ಸಾಧನೆ ಮಾಡಿತು. ಮಲ್ಲಂಡ ಬಲ್ಲಡಿಚಂಡ ವಿರುದ್ಧ ೩೦-೧೬ ಅಂಕಗಳ ಗೆಲುವು ಪಡೆದುಕೊಂಡಿತು. ನೆರವಂಡ ಕಂಬೆಯAಡ ತಂಡವನ್ನು ೩೦-೧೦ ಅಂಕಗಳಿAದ ಮಣಿಸಿತು. ಮಳೆಯಿಂದಾಗಿ ಮಾಣಿಪಂಡ ಹಾಗೂ ಕಾಳಿಮಾಡ ತಂಡಗಳ ನಡುವಿನ ಪಂದ್ಯವನ್ನು ಶನಿವಾರಕ್ಕೆ ಮುಂದೂಡಲಾಯಿತು.