ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸೋಮವಾರಪೇಟೆ ತಾಲೂಕಿನ ೮೮,೫೧೦ ಮತದಾರರಲ್ಲಿ ಈವರೆಗೆ ಮ್ಯಾಪಿಂಗ್ ಹಾಗೂ ಪ್ರೋಗೆನ್ಸಿ (ಸಂತತಿ) ಸೇರಿ ೮೨,೮೫೪ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು ಶೇ. ೯೩.೬೧ ರಷ್ಟು ಯಶಸ್ಸು ಸಾಧಿಸಿದೆ. ಕುಶಾಲನಗರ ತಾಲೂಕಿನ ೯೪,೪೯೪ ಮತದಾರರಲ್ಲಿ ಮ್ಯಾಪಿಂಗ್ ಮತ್ತು ಪ್ರೋಗೆನ್ಸಿ (ಸಂತತಿ) ಸೇರಿ ೯೦,೦೭೦ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇ. ೯೫.೩೨ ರಷ್ಟು ಗುರಿ ಸಾಧಿಸಿದೆ. ಮಡಿಕೇರಿ ತಾಲೂಕಿನಲ್ಲಿ ೫೬,೩೧೩ ಮತದಾರರಲ್ಲಿ ಮ್ಯಾಪಿಂಗ್ ಮತ್ತು ಪ್ರೋಗೆನ್ಸಿ (ಸಂತತಿ) ಸೇರಿ ೫೨,೮೬೭ ಮತದಾರರ ಮ್ಯಾಪಿಂಗ್ ಆಗಿದ್ದು, ಶೇ. ೯೩.೮೮ ರಷ್ಟು ಪೂರ್ಣಗೊಂಡಿದೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ;
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮಡಿಕೇರಿ ತಾಲೂಕಿನ ೬೬,೮೬೧ಮತದಾರರಲ್ಲಿ ಮ್ಯಾಪಿಂಗ್ ಮತ್ತು ಪ್ರೋಗೆನ್ಸಿ (ಸಂತತಿ) ಸೇರಿ ೬೩,೧೧೯ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇ. ೯೪.೪೦ ರಷ್ಟು ಪೂರ್ಣಗೊಂಡಿದೆ. ವೀರಾಜಪೇಟೆ ತಾಲೂಕಿನ ೮೦,೦೭೪ ಮತದಾರರಲ್ಲಿ ಮ್ಯಾಪಿಂಗ್ ಮತ್ತು ಪ್ರೋಗೆನ್ಸಿ (ಸಂತತಿ) ಸೇರಿ ಇದುವರೆಗೆ ೭೬,೫೪೦ ಮತದಾರರ ಮ್ಯಾಪಿಂಗ್ ಪೂರ್ಣಗೊಂಡು, ಶೇ. ೯೫.೫೯ ರಷ್ಟು ಗುರಿ ಸಾಧಿಸಲಾಗಿದೆ.
ಪೊನ್ನಂಪೇಟೆ ತಾಲೂಕಿನ ೮೩,೯೬೭ ಮತದಾರರ ಪೈಕಿ ಇದುವರೆಗೆ ಮ್ಯಾಪಿಂಗ್ ಮತ್ತು ಪ್ರೋಗೆನ್ಸಿ (ಸಂತತಿ) ಸೇರಿ ಇದುವರೆಗೆ ೭೫,೭೦೧ ಮತದಾರರ ಮ್ಯಾಪಿಂಗ್ ಆಗಿದ್ದು, ಶೇ. ೯೦.೧೬ ರಷ್ಟು ಪೂರ್ಣಗೊಂಡಿದೆ.