ಸೋಮವಾರಪೇಟೆ, ಮೇ. ೮: ಇಲ್ಲಿನ ಜೂನಿಯರ್ ಕಾಲೇಜು ಟರ್ಫ್ ಮೈದಾನದಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ಆಹ್ವಾನಿತ ಪ್ರತಿಷ್ಠಿತ ತಂಡಗಳ ನಡುವಿನ ಯಿಫಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾಟ ಶುಭಾರಂಭಗೊAಡಿದೆ.

ಕ್ರೀಡಾಕೂಟದಲ್ಲಿ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸಿವೆ.

ಇಂದು ನಡೆದ ೨ನೇ ದಿನದ ಲೀಗ್ ಪಂದ್ಯಾವಳಿಯಲ್ಲಿ ಆತಿಥೇಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನ ಯಿಫಾ ತಂಡವನ್ನು ೩-೧ ಗೋಲುಗಳ ಅಂತರದಿAದ ಸದರ್ನ್ ಕಮಾಂಡ್ ತಂಡ ಮಣಿಸಿತು. ೨ನೇ ಪಂದ್ಯದಲ್ಲಿ ಎಜಿಓಆರ್‌ಸಿ ತಂಡ ಕಸ್ಟಮ್ಸ್ ತಂಡದ ವಿರುದ್ಧ ೪-೨ ಗೋಲುಗಳ ಅಂತರದಿAದ ಸೋಲನುಭವಿಸಿತು. ಮೂರನೇ ಪಂದ್ಯದಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ ತಂಡ ಸೌತ್ ವೆಸ್ಟçನ್ ರೈಲ್ವೇಸ್ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು. ೪ನೇ ಪಂದ್ಯದಲ್ಲಿ ಕೆನರಾ ಬ್ಯಾಂಕ್ ತಂಡ ಡಿವೈಇಎಸ್ ತಂಡವನ್ನು ೧-೦ ಅಂತರದಿAದ ಸೋಲಿಸಿತು.

ಹಾಕಿ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಆಭರಣ್ ಸುದೇವ್, ನಿತಿನ್ ತಿಮ್ಮಯ್ಯ, ಶೇಷೇಗೌಡ, ಪ್ರಧಾನ್ ಸೋಮಣ್ಣ, ವಿ.ಎಸ್. ವಿನಯ್, ರಜಂತ್, ಪಿ.ಎಲ್. ತಿಮ್ಮಣ್ಣ, ಮಂಜಿತ್, ಎಂ.ಬಿ. ಅಯ್ಯಪ್ಪ ಅವರುಗಳೊಂದಿಗೆ ಜೂನಿಯರ್ ಇಂಡಿಯಾದ ಎನ್.ಎಂ. ಸೂರ್ಯ, ಜೈಪ್ರಕಾಶ್, ಜೀತ್‌ಪಾಲ್, ಬಿಪಿನ್, ಹರೀಶ್ ಮುತ್ತುಗಾರ್, ಇಂಡಿಯನ್ ರೈಲ್ವೇ ತಂಡದ ಪೂಣಚ್ಚ, ಇಂಡೋರ್ ಕ್ರಿಕೆಟ್ ಅಂತರರಾಷ್ಟಿçÃಯ ಆಟಗಾರ ಕರಿನೆರವಂಡ ಸೋಮಣ್ಣ ಅವರುಗಳು ವಿವಿಧ ತಂಡಗಳ ಪರವಾಗಿ ಮೈದಾನದಲ್ಲಿದ್ದು, ಹಾಕಿ ಕ್ರೀಡೆಯ ರಸದೌತಣ ಉಣಬಡಿಸುತ್ತಿದ್ದಾರೆ.

ಇದರೊಂದಿಗೆ ಸೀನಿಯರ್ ಇಂಡಿಯಾ ಕ್ಯಾಂಪರ್ ಕೆ.ಪಿ. ಸೋಮಯ್ಯ, ಜೂನಿಯರ್ ಇಂಡಿಯಾ ವಲ್ಡ್ ಕಪ್ ತಂಡದಲ್ಲಿದ್ದ ಪಿ.ವಿ. ಸುನಿನ್, ಕ್ಯಾಂಪರ್‌ಗಳಾದ ವಿಶ್ವಾಸ್, ನಿಯಾಸ್,ತರುಣ್, ನ್ಯಾಷನಲ್ ಗೇಮ್ಸ್ ಮೆಡಲಿಸ್ಟ್ಗಳಾದ ಭರತ್, ಶಮಂತ್, ಪುನೀತ್, ಶಾನ್ ಮೊಣ್ಣಪ್ಪ ಅವರುಗಳು ತಮ್ಮ ಅಮೋಘ ಆಟದ ಮೂಲಕ ಹಾಕಿ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ.

ಹಾಕಿ ಇಂಡಿಯಾ, ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ನ ಸಹಕಾರದೊಂದಿಗೆ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಆಯೋಜಿಸಿರುವ ಪಂದ್ಯಾವಳಿಯ ನಿರ್ದೇಶಕರಾಗಿ ಹಾಕಿ ಕೂರ್ಗ್ನ ಬಡಕಡ ದೀನಾ ಪೂವಯ್ಯ, ಪಂದ್ಯಾವಳಿ ವೀಕ್ಷಕರಾಗಿ ಅಂಜಪರವAಡ ಕುಶಾಲಪ್ಪ ಅವರುಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದರೊಂದಿಗೆ ತಾಂತ್ರಿಕ ಟೇಬಲ್‌ನಲ್ಲಿ ಜೆಸಿಬಿ ವಿನೋದ್, ತೀರ್ಪುಗಾರರಾಗಿ ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ನ ಬೊಳ್ಳಚಂಡ ನಾಣಯ್ಯ, ಮೋಕಚಂಡ ನಾಚಪ್ಪ, ದೀಕ್ಷಿತ್, ಸುಪ್ರಿತ್, ಅಪ್ಪಚೆಟ್ಟೋಳಂಡ ಅಣ್ಣಪ್ಪ ಅವರುಗಳು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ನಾಳೆ ಫೈನಲ್

ತಾ. ೧೦ರಂದು (ನಾಳೆ) ಫೈನಲ್ ಪಂದ್ಯ ನಡೆಯಲಿದೆ. ಎ. ಮತ್ತು ಬಿ. ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳ ನಡುವೆ ಅಪರಾಹ್ನ ೩ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ. ಪೂರ್ವಾಹ್ನ ೧೧ ಗಂಟೆಗೆ ಎರಡೂ ಗುಂಪುಗಳಲ್ಲಿ ದ್ವಿತೀಯ ಸ್ಥಾನ ಪಡೆಯುವ ತಂಡಗಳ ನಡುವೆ ಮೂರನೇ ಬಹುಮಾನಕ್ಕೆ ಸೆಣೆಸಾಟ ನಡೆಯಲಿದೆ. ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೧ ಲಕ್ಷ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಯಿಫಾ ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದ್ದಾರೆ.