ಮಡಿಕೇರಿ, ಮೇ ೧೦: ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ಸೀಸನ್ ೪ ಇದರ ವತಿಯಿಂದ ಗಾಳಿಬೀಡು ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ವಿವಿಧ ಕ್ರೀಡಾಕೂಟಗಳು ಯಶಸ್ವಿಯಾಗಿ ಮುಕ್ತಾಯಗೊಂಡವು.
ಕ್ರಿಕೆಟ್ ಪಂದ್ಯಾಟವನ್ನು ಗಾಳಿಬೀಡು ಗ್ರಾಮದ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಯಾಳದಾಳು ಕೇಶವಾನಂದ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗಿರಿ ಗಾಳಿಬೀಡು ಚಾಂಪಿಯನ್ಸ್ ಕ್ಲಬ್‌ನ ಅಧ್ಯಕ್ಷ ಕಪಿಲ್ ಕುಮಾರ್ ದುಗ್ಗಳ, ಉಪಾಧ್ಯಕ್ಷ ಡಿಶಾಂತ್ ಕೋಚನ ಹಾಗೂ ಸದಸ್ಯರು ಉಪಸ್ಥಿತರಿದ್ದರು
ಕ್ರಿಕೆಟ್ ಪಂದ್ಯಾಟದ ಜೊತೆಯಲ್ಲಿ ಗಾಳಿಬೀಡು ಗ್ರಾಮಸ್ಥರಿಗೆ ವಿವಿಧ ಕ್ರೀಡಾಪಟುಗಳು ಹಾಗೂ ಕೊಡಗು ಜಿಲ್ಲಾಮಟ್ಟದ ಮುಕ್ತ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಪುರುಷರ ಹಗ್ಗಜಗ್ಗಾಟದ ಪ್ರಥಮ ಸ್ಥಾನವನ್ನು ಈಶ್ವರ ಇಗ್ಗುತಪ್ಪ, ದ್ವಿತೀಯ ಸ್ಥಾನವನ್ನು ಈಶ್ವರ ಇಗ್ಗುತಪ್ಪ ಬಿ ತಂಡ ಪಡೆದುಕೊಂಡಿತು.
ಮಹಿಳೆಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಕೊಡಗು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ತಂಡ, ದ್ವಿತೀಯ ಸ್ಥಾನವನ್ನು ಗಾಳಿಬೀಡು ತಂಡ ಪಡೆದುಕೊಂಡಿತು.
ಕ್ರಿಕೆಟ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನ ಕೆಪಿ ರಾಕರ್ಸ್ ತಂಡ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಟೀಮ್ ಭಗವತಿ ತಂಡ ಪಡೆದುಕೊಂಡಿತು.
ಅದೇ ರೀತಿ ಪುರುಷರ ವಿಭಾಗದಲ್ಲಿ ಗುಡ್ಡಗಾಡು ಓಟ ಹಾಗೂ ಗ್ರಾಮಸ್ಥರ ವಿವಿಧ ಕ್ರೀಡಾ ಕ್ರೀಡಾಕೂಟಗಳು ಜರುಗಿದವು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪೊಲೀಸ್ ಉಪ ವರಿಷ್ಠಾಧಿಕಾರಿ ಸೂರಜ್, ಸಮಾಜ ಸೇವಕ ಎಡಿಕೇರಿ ಪ್ರಸನ್ನ, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೆದಾರ ಕೆ. ಮಧುಕರ, ಮತ್ತೋರ್ವ ಮುಖ್ಯ ಅತಿಥಿ ಜಯಂತಿ ಆರ್. ಶೆಟ್ಟಿ ಹಾಗೂ ಚಾಂಪಿಯನ್ಸ್ ಕ್ಲಬ್‌ನ ಅಧ್ಯಕ್ಷ ಕಪಿಲ್ ಕುಮಾರ್ ದುಗ್ಗಳ ಉಪಸ್ಥಿತರಿದ್ದರು.