ಪೊನ್ನಂಪೇಟೆ, ಮೇ ೧೦: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ ೨೮ ರಿಂದ ಮೇ ೪ ರವರೆಗೆ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರ ಯಶಸ್ವಿಯಾಗಿ ನಡೆಯಿತು.

ಪ್ರಾಂಶುಪಾಲೆ ನಿರ್ಮಲಾ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದ ಉದ್ಘಾಟನೆಯನ್ನು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೆಂಕಟೇಶ ಪ್ರಸನ್ನ ನೆರವೇರಿಸಿ ಮಾತನಾಡಿದರು.

ಅತಿಥಿಗಳಾಗಿ ಮುಖ್ಯ ಶಿಕ್ಷಕ ಕುಮಾರ ಸ್ವಾಮಿ ಟಿ.ಬಿ., ಎಸ್‌ಡಿಎಂಸಿ ಉಪಾಧ್ಯಕ್ಷ ಹರೀಶ್, ಹಾಕತ್ತೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ಬಿ.ಪಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರೇವತಿ, ಪ್ರೇಮ ನಿಂಗಪ್ಪ, ಎನ್‌ಎಸ್‌ಎಸ್ ಅಧಿಕಾರಿ ಡಾ. ವೇಣುಗೋಪಾಲ್ ಹೆಚ್.ಎಸ್. ಉಪಸ್ಥಿತರಿದ್ದರು. ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಮಾಲೋಚಕಿ ಅಶ್ವಿತ ಆಪ್ತ ಹದಿಹರೆಯದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ದೈಹಿಕ ಶಿಕ್ಷಣ ನಿರ್ದೇಶಕಿ ರಾಖಿ ಪೂವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಯಂ ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಸಿದ್ದಾಪುರ ಅಡ್ರೈಡ್ ಅಕಾಡೆಮಿಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಚಿನ್ ಎನ್.ಟಿ. ಉಪನ್ಯಾಸ ನೀಡಿದರು. ಸ.ಪ್ರ.ದ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕ ರೋಷನ್ ತಮ್ಮಯ್ಯ ವ್ಯಕ್ತಿತ್ವ ವಿಕಾಸದ ಬಗ್ಗೆ ಉಪನ್ಯಾಸವನ್ನು ನೀಡಿದರು. ಉಪನ್ಯಾಸಕಿ ಪ್ರೀತು ಅಧ್ಯಕ್ಷತೆ ವಹಿಸಿದ್ದರು. ‘ಸೈಬರ್ ಅಪರಾಧ ಮತ್ತು ಅದರ ಮುಂಜಾಗ್ರತೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ವನ್ನು ಕುಶಾಲನಗರ ಸ.ಪ್ರ. ದರ್ಜೆ ಕಾಲೇಜು ಉಪನ್ಯಾಸಕ ಸಿದ್ದರಾಮ ಗೌಡ ನಡೆಸಿಕೊಟ್ಟರು.

ಸ.ಪ್ರ.ದ ಮಹಿಳಾ ಕಾಲೇಜು ಅಧೀಕ್ಷಕ ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಸುಧಾಕರ್ ಯುದ್ಧ ಮತ್ತು ಅದರ ಪರಿಣಾಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು.

ಕಾರ್ಯಕಮದ ಅಧ್ಯಕ್ಷತೆಯನ್ನು ಸಹಾಯ ಪ್ರಾಧ್ಯಾಪಕ ಮುದ್ದಪ್ಪ ವಹಿಸಿದ್ದರು.

ಶಿಬಿರದ ಸಮಾರೋಪ

ಪ್ರಾಂಶುಪಾಲೆ ನಿರ್ಮಲ ಹೆಚ್.ಪಿ. ಅಧ್ಯಕ್ಷತೆಯಲ್ಲಿ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ಉಪನ್ಯಾಸಕಿ ಪ್ರತಿಮಾ ಹರೀಶ್ ರೈ, ಮುಖ್ಯ ಶಿಕ್ಷಕ ಕುಮಾರ ಸ್ವಾಮಿ ಟಿ.ಬಿ., ದೈಹಿಕ ಶಿಕ್ಷಣ ನಿರ್ದೇಶಕಿ ರಾಖಿ ಪೂವಣ್ಣ, ಶಿಬಿರದ ನಾಯಕಿ ಆಶಿತಾ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ವೇಣುಗೋಪಾಲ್ ಹೆಚ್.ಎಸ್. ಶಿಬಿರದ ವರದಿ ವಾಚಿಸಿದರು.

೭ ದಿನಗಳ ಶಿಬಿರದಲ್ಲಿ, ಶಾಲೆಯ ಕೈತೋಟ ಮತ್ತು ಹೂತೋಟ, ಅಂಗನವಾಡಿಯ ಆಟದ ಉದ್ಯಾನವನವನ್ನು ಸ್ವಚ್ಛ ಮಾಡಿದರು. ಹಾಕತ್ತೂರು ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ೩೪ ಚೀಲಗಳಷ್ಟು ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.

ಪ್ರತಿದಿನ ಸಂಜೆ ೬ ಗಂಟೆಗೆ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಕಾರ್ಯಕ್ರಮದಲ್ಲಿ ಊರಿನವರು ಮತ್ತು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದರು. ಶಾಲೆಯ ಮುಖ್ಯ ಶಿಕ್ಷಕ ಕುಮಾರ ಸ್ವಾಮಿ ಅವರು ಮಿಮಿಕ್ರಿ ಮತ್ತು ಪವಾಡಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬೋಧಕ - ಬೋಧಕೇತರ ಸಿಬ್ಬಂದಿಗಳು, ಕೊಡಗು ವಿಶ್ವವಿದ್ಯಾಲಯ ರಾಷ್ಟಿçÃಯ ಸೇವಾ ಯೋಜನಾ ಸಂಚಾಲಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಕತ್ತೂರಿನ ಶಿಕ್ಷಕರು ಮತ್ತು ಹಾಕತ್ತೂರಿನ ಗ್ರಾಮಸ್ಥರು ಶಿಬಿರದ ಯಶಸ್ಸಿಗೆ ಸಹಕರಿಸಿದರು.