ಮಡಿಕೇರಿ, ಮೇ ೧೧: ಐಗೂರು ಹಾಗೂ ಕಾಜೂರು ಭಾಗದಲ್ಲಿ ಕಳೆದ ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಜಲಜೀವನ್ ಮಿಷನ್ ಕಾಮಗಾರಿ ಇದೀಗ ಪುನರಾರಂಭಗೊAಡಿದೆ.
ಏ. ೭ ರಂದು ‘ಶಕ್ತಿ’ ಪತ್ರಿಕೆಯಲ್ಲಿ ಈ ಬಗ್ಗೆ ವಿಸ್ತೃತ ವರದಿ ಪ್ರಕಟವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಸಂಬAಧಪಟ್ಟ ಇಲಾಖಾಧಿಕಾರಿಗಳು ಕಾಮಗಾರಿಗೆ ವೇಗ ನೀಡಿದ್ದಾರೆ.
ಕಾಜೂರು ಅರಣ್ಯ ವಸತಿಗೃಹದ ಬಳಿ ೫೦,೦೦೦ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಿ ಮೂರು ವರ್ಷಗಳೇ ಕಳೆದಿದ್ದವು. ಕಳೆದ ಆಗಸ್ಟ್ನಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಆನಂದ್ ಪ್ರಕಾಶ್ ಮೀನಾ ಅವರು ಸ್ಥಳಕ್ಕೆ ಭೇಟಿ ನೀಡಿ, ಮೂರು ತಿಂಗಳೊಳಗೆ ನೀರು ಪೂರೈಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ನಿರ್ಲಕ್ಷö್ಯದಿಂದ ಎಂಟು ತಿಂಗಳು ಕಳೆದರೂ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಿ, ಕೊಳವೆ ಬಾವಿಗೆ ಮೋಟಾರ್ ಅಳವಡಿಸುವ ಕೆಲಸ ಕೇವಲ ಕಡತಗಳಿಗೆ ಸೀಮಿತವಾಗಿತ್ತು. ವರದಿ ಪ್ರಕಟವಾದ ಎರಡೇ ದಿನಗಳಲ್ಲಿ ವಿದ್ಯುತ್ ಇಲಾಖೆ ಕಾರ್ಯಪ್ರವೃತ್ತವಾಗಿ ಕೊಳವೆ ಬಾವಿಯ ಸಮೀಪ ಹೊಸ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಪೂರ್ಣಗೊಳಿಸಿತ್ತು. ಕೊಳವೆ ಬಾವಿಗೆ ಮೋಟಾರ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಟ್ಯಾಂಕ್ಗೆ ನೀರು ತುಂಬಿಸಲು ಪೈಪ್ಲೈನ್ ಜೋಡಿಸುವ ಕೆಲಸವೂ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊAಡAತೆ ನಡೆದರೆ ಮುಂದಿನ ವಾರದ ವೇಳೆಗೆ ಗ್ರಾಮದ ಪ್ರತಿ ಮನೆಗೂ ನೀರು ತಲುಪುವ ನಿರೀಕ್ಷೆಯಿದೆ. - ಜಿ.ಕೆ. ಅವಿಲಾಶ್