ಮಡಿಕೇರಿ, ಮೇ ೧೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ರಿಂಕ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ರಿಂಕ್ ಹಾಕಿ ಹಬ್ಬದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪೊನ್ನಚ್ಚನ ಲೆಜೆಂಡ್ಸ್ ತಂಡ ಅಮೆಮನೆ ವಿರುದ್ಧ ೧-೦ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಪಟ್ಟಡ ತಂಡ ಕೊಲ್ಯದ ವಿರುದ್ಧ ೧-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆನೆರ ತಂಡ ಬಾರಿಕೆ (ಮರಂದೋಡ) ವಿರುದ್ಧ ೫-೨ ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ದೇವಜನ ಹೊಸೋಕ್ಲು ತಂಡ ಕಟ್ರತನ ವಿರುದ್ಧ ೧-೦ ಗೋಲುಗಳ ಅಂತರದಲ್ಲಿ ಜಯಗಳಿಸಿತು.
ಪೊನ್ನಚ್ಚನ ಲೆಜೆಂಡ್ಸ್ ವಿರುದ್ಧ ಪೊಕ್ಕುಳಂಡ್ರ ೫-೧ ಗೋಲುಗಳ ಗೆಲುವು ಸಾಧಿಸಿತು. ಜೈನೀರ ತಂಡದ ವಿರುದ್ಧ ಪೊನ್ನಚ್ಚನ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪೈಕೇರ ವಿರುದ್ಧ ಬಿಟ್ಟೀರ ೩-೧ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಡಿಕಲ್ ತಂಡ ಪಟ್ಟಡ ವಿರುದ್ಧ ೬-೧ ಗೋಲುಗಳ ಅಂತರದಲ್ಲಿ ಜಯಿಸಿತು. ದೇವಜನ ಹೊಸೋಕ್ಲು ವಿರುದ್ಧ ಆನೆರ ೪-೦ ಗೋಲುಗಳ ಅಂತರದಲ್ಲಿ ಜಯಗಳಿಸಿತು.