ಕಡಂಗ, ಮೇ ೧೨: ನಾಪೋಕ್ಲು ಬಳಿಯ ಕೊಟ್ಟಮುಡಿ ಆಜಾದ್ ನಗರದ ಹೈದ್ರುಸ್ ಜುಮಾ ಮಸೀದಿಯಲ್ಲಿ ಸ್ಥಳೀಯ ರಿಫಾಯಿ ರಾತೀಬ್ ಸಂಘದ ವತಿಯಿಂದ ಊರಿನಿಂದ ಈ ವರ್ಷದ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಿಕರಿಗೆ ಮಾಲಾರ್ಪಣೆ ಮಾಡಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭ ಸ್ಥಳೀಯ ಉಸ್ತಾದರು, ಗ್ರಾಮಸ್ಥರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.