ಚೆಯ್ಯಂಡಾಣೆ, ಮೇ ೧೨ : ಪೆರುಂಬಾಡಿ ತನ್‌ವೀರುಲ್ ಇಸ್ಲಾಂ ಮದ್ರಸದ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ವೇದಿಕೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಪೆರುಂಬಾಡಿ ಮದ್ರಸ ಸಭಾಂಗಣದಲ್ಲಿ ಎಂ.ಪಿ. ಮುಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಖತೀಬ್ ಮುಹಮ್ಮದ್ ಹನೀಫ್ ಫೈಝಿ ಉದ್ಘಾಟಿಸಿ ಮಾತನಾಡಿದರು.
ಇಸ್ಮಾಯಿಲ್ ಮುಸ್ಲಿಯಾರ್ ಮಾತನಾಡಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಚೆರ್ಮೆನ್ ಆಗಿ ಇಸ್ಮಾಯಿಲ್ ಮುಸ್ಲಿಯಾರ್ ಕನ್ವಿನರ್ ಆಗಿ ಸ್ವಾಬಿರ್ ಅಝ್ಹರಿ, ಅಧ್ಯಕ್ಷರಾಗಿ ಮುಹಮ್ಮದ್ ರಿಯಾಝ್, ಉಪಾಧ್ಯಕ್ಷರಾಗಿ ಮುಹಮ್ಮದ್ ರಬೀಹ್, ಸಿಯಾನ್, ಫವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಸಹಲ್, ಕೋಶಾಧಿಕಾರಿಯಾಗಿ ನಿಹಾಲ್, ಕಾರ್ಯದರ್ಶಿಯಾಗಿ ಶಾಹುಲ್ ಆಯ್ಕೆಯಾದರು. ಸುಫೈಲ್, ನಿಹಾಲ್, ಶಿಬಿಲಿ ಸಂಯುಕ್ತ ಕಾರ್ಯದರ್ಶಿಗಳಾಗಿ ನೇಮಕಗೊಂಡರು. ಅದ್ನಾನ್, ಅಮೀನ್, ಸ್ವಾದಿಖ್ ಕೌನ್ಸಿಲರ್‌ಗಳಾಗಿ ಮತ್ತು ದಿಯಾನ್, ಸೈದ್ ಶಾನ್ ಅದಬ್ ಕೋಆರ್ಡಿನೇಟರ್‌ಗಳಾಗಿ ಆಯ್ಕೆಯಾದರೆ, ಶಮ್ಮಾಸ್ ಟೆಕ್ ಆಡ್ಮಿನ್ ಆಗಿ ಹಾಗೂ ಮುಹಜಿರ್ ಅಲಿಫ್ ಕೋಆರ್ಡಿನೇಟರ್ ಆಗಿ ನೇಮಕಗೊಂಡರು. ರಿಹಾನ್, ಮುಹಮ್ಮದ್ ಹಾಶಿರ್, ಮನಾಫ್ ಖಿದ್ಮ ವಿಭಾಗಕ್ಕೆ ನೇತೃತ್ವ ನೀಡಲಿದ್ದಾರೆ. ಮುಹಮ್ಮದ್ ಸಹಲ್ ಮದ್ರಸ ನಾಯಕನಾಗಿ ಮತ್ತು ಹಿಬಾ ಫಾತಿಮಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ವಾಬಿರ್ ಅಝರಿ ಸ್ವಾಗತಿಸಿ, ವಂದಿಸಿದರು.