ಕುಶಾಲನಗರ, ಮೆ. ೧೨: ರೋಟರಿ ಸಂಸ್ಥೆಯು ಸಮಾಜ ಸೇವಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಅವರು ಹೇಳಿದರು.
ಕುಶಾಲನಗರದ ರೋಟರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಾಜ್ಯಪಾಲ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಶಾಲನಗರÀ ರೋಟರಿ ಕ್ಲೀನ್ ಸಿಟಿ ಘೋಷ ವಾಕ್ಯದ ಮೂಲಕ ನಗರದ ಪ್ರವೇಶ ಭಾಗದಿಂದ ಪುರಸಭೆಯ ವ್ಯಾಪ್ತಿ ಮತ್ತು ಪ್ರವಾಸಿ ತಾಣಗಳಾದ ದುಬಾರೆ, ಚಿಕ್ಲಿಹೊಳೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗಾಗಿ ಉತ್ತಮ ವ್ಯವಸ್ಥೆ ಮಾಡಿದೆೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ಸಂಸ್ಥೆಯ ಸದಸ್ಯರು, ಕುಶಾಲನಗರ ಪುರಸಭೆ, ಕ್ಷೇತ್ರದ ಶಾಸಕರು ಮತ್ತು ಎಸ್‌ಎಲ್‌ಎನ್ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ರೋಟರಿಯ ಐವತ್ತು ವರ್ಷಗಳ ಸುವರ್ಣ ಸಂಭ್ರಮದ ಯೋಜನೆ ಯಶಸ್ಸಿಗೆ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಸೇವಾ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಕೈಗೊಳ್ಳಲಿದೆ ಎಂದರು. ಈ ಸಂದರ್ಭ ವಿವೇಕಾನಂದ ಯೂಥ್ ಮೂಮೆಂಟ್‌ನ ನಿರ್ವಾಹಕಿ ಸುನಿತಾ ಅವರ ಕಾರ್ಯದಕ್ಷತೆಯನ್ನು ಗುರುತಿಸಿ ರೋಟರಿ ಸಂಸ್ಥೆ ಸನ್ಮಾನಿಸಿ ಗೌರವಿಸಿತು.
ರೋಟರಿ ಸಂಸ್ಥೆಯ ಸದಸ್ಯರಾಗಿರುವ ಸಂತೋಷ್ ಲಕ್ಷ್ಮಣ್ ಅವರು ಸುಮಾರು ೫೩ ಬಾರಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವದರಿAದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಉಪ ರಾಜ್ಯಪಾಲ ಉಲ್ಲಾಸ್ ಕೃಷ್ಣ, ರುದ್ರೇಶ್ ಪಟೇಲ್, ಎಚ್ ಪಿ ಮಂಜುನಾಥ್, ಎಸ್ ಕೆ ಸತೀಶ್, ಎಂ ಡಿ ರಂಗಸ್ವಾಮಿ, ಮಹೇಶ್ ನಾಲ್ವಡೆ, ಡಾ. ಹರಿ ಶೆಟ್ಟಿ, ಡಾ. ಧರಣೇಂದ್ರ, ಎ. ಎ. ಚೆಂಗಪ್ಪ, ರಾಣಿ ಉಲ್ಲಾಸ್, ಆರತಿಶೆಟ್ಟಿ ರೋಟರಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.